ಹೊಸ ಹಣಕಾಸು ವರ್ಷದ ಮೊದಲ ದಿನವೇ ಕುಸಿಯಿತು ಷೇರುಪೇಟೆ

ಹೊಸ ಹಣಕಾಸು ವರ್ಷದ ಮೊದಲ ದಿನವೇ ಕುಸಿಯಿತು ಷೇರುಪೇಟೆ

ಮುಂಬೈ: ಕರೊನಾ ಕರಿಛಾಯೆ ಷೇರುಪೇಟೆಯನ್ನೂ ಆವರಿಸಿರುವ ಕಾರಣ ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಮತ್ತು ಅಲ್ಪ ಏರಿಕೆ ದಾಖಲಿಸುತ್ತಲೇ ಇದೆ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಶ ಕುಸಿದರೆ, ನಿಫ್ಟಿ 8,400ರ ಕೆಳಕ್ಕೆ ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್​, ಕೊಟಾಕ್ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಇನ್​ಫೋಸಿಸ್​ ಷೇರುಗಳು ನಷ್ಟ ಅನುಭವಿಸಿದ್ದೇ ಇದಕ್ಕೆ ಕಾರಣ.

ಹೊಸ ಹಣಕಾಸು ವರ್ಷದ ಮೊದಲ ದಿನವೇ ನೆಗೆಟಿವ್​ ಬೆಳವಣಿಗೆ ಕಾಣಿಸಿದ್ದು, 30 ಷೇರುಗಳ ಸೆನ್ಸೆಕ್ಸ್​ 714.74 ಅಂಶ (2.43%) ಕುಸಿದು 28,753.75ರಲ್ಲಿ ಬುಧವಾರ ಬೆಳಗ್ಗೆ ವಹಿವಾಟು ಮುಂದುವರಿಸಿದೆ. ಇದೇ ವೇಳೆ, ನಿಫ್ಟಿ 199 ಅಂಶ (2.31%) ಕುಸಿತ ಕಂಡು 8, 398.75ರಲ್ಲಿ ವಹಿವಾಟು ನಡೆಸಿದೆ.