ಪಂಜಾಬ್ ನ ನಾಲ್ವರು ಶಾಸಕರಿಗೆ ಕೊರೊನಾ ಪಾಸಿಟಿವ್

ಪಂಜಾಬ್ ನ ನಾಲ್ವರು ಶಾಸಕರಿಗೆ ಕೊರೊನಾ ಪಾಸಿಟಿವ್

ಪಂಜಾಬ್ : ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಪಂಜಾಬ್ ನಾಲ್ವರು ಶಾಸಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್ ಸಿಎಂ ಅಮರೇಂದ್ರ ಸಿಂಗ್, ನಮ್ಮ ರಾಜ್ಯದ ನಾಲ್ವರು ಶಾಸಕರಾದ ರಣದೀಪ್ ನಭಾ, ಅಂಗದ್ ಸಿಂಗ್, ಅಮನ್ ಅರೋರಾ ಮತ್ತು ಪಾರ್ಮಿಂದರ್ ದಿಂಢ್ಸಾ ಅವರು ಕೋವಿಡ್ 19 ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಶೀಘ್ರವೇ ಅವರೆಲ್ಲೂ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.