21 ದಿನ ಲಾಕ್ ಡೌನ್ ಹಿಂದಿದೆ ವೈಜ್ಞಾನಿಕ ಕಾರಣ

21 ದಿನ ಲಾಕ್ ಡೌನ್ ಹಿಂದಿದೆ ವೈಜ್ಞಾನಿಕ ಕಾರಣ

ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ವಿವಿಧ ದೇಶಗಳು ವಿವಿಧ ಕ್ರಮಗಳನ್ನು ಅನುಸರಿಸುತ್ತಿವೆ. ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಪಠಿಸುತ್ತಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡರು. ಆ ಮೂಲಕ ಎಲ್ಲಾ ಭಾರತೀಯರು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮೋದಿ ಮನವಿ ಮಾಡಿದರು.India Lockdown: ಕೇಂದ್ರ ಸರ್ಕಾರದ ಈ ನಿಯಮಗಳ ಪಾಲನೆ ಕಡ್ಡಾಯ

ಅಷ್ಟಕ್ಕೂ, ಪ್ರಧಾನಿ ಮೋದಿ '21' ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ್ದು ಏಕೆ.?

ಇದರಿಂದ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇದೆಯಾ.? ಎಂಬ ಪ್ರಶ್ನೆಗಳು ಉದ್ಭವವಾಗುವುದು ಸಹಜ. 21 ದಿನಗಳ ಲಾಕ್‌ ಡೌನ್ ಅವಧಿಯನ್ನು ಘೋಷಿಸುವ ಮೋದಿಯ ನಿರ್ಧಾರದ ಹಿಂದೆ ವೈಜ್ಞಾನಿಕ ಮಾಹಿತಿ ಅಡಗಿದೆ. ಸಾಮಾನ್ಯವಾಗಿ ದೇಹ ಪ್ರವೇಶಿಸುವ ವೈರಸ್ ಗಳು ಎರಡನೇ ದಿನದಿಂದ ತಮ್ಮ ಪ್ರಭಾವವನ್ನು ಬೀರಲಾರಂಭಿಸುತ್ತವೆ. ಈ ಹಿನ್ನಲೆಯಲ್ಲಿ ದೇಹ ಒಂದು ವಾರ ಕಾಲ ಬಳಲುತ್ತದೆ. ಬಳಿಕ ನಿಧಾನವಾಗಿ ದೇಹದೊಳಗಿನ ರೋಗ ನಿರೋಧಕ ಶಕ್ತಿ ವೈರಸ್ ವಿರುದ್ಧ ಹೋರಾಟವನ್ನು ಆರಂಭಿಸುತ್ತದೆ. ಹೀಗೆ ನಡೆಯುವ ಪ್ರಕ್ರಿಯೆಯಲ್ಲಿ ವೈರಸ್ ಗಳ ಎದುರು ಇಮ್ಯೂನಿಟಿ ಜಯ ಸಾಧಿಸಿದರೆ ರೋಗಿ ಸುಧಾರಿಸಿಕೊಳ್ಳಲು ಆರಂಭಿಸುತ್ತಾನೆ. ಇಲ್ಲದಿದ್ದಲ್ಲಿ ಆರೋಗ್ಯ ಪರಿಸ್ಥಿತಿ ಹದಗೆಡುತ್ತದೆ. ಈ ಎಲ್ಲಾ ಪ್ರಕ್ರಿಯೆ ನಡೆಯಲು 21 ದಿನ ಬೇಕು. ಈ ಹಿಂದೆ ಕಾಣಿಸಿಕೊಂಡಿದ್ದ ಎಬೋಲಾ ರೋಗವೂ 21 ದಿನಗಳ ಇನ್ಕ್ಯುಬೇಷನ್ ಅವಧಿಯನ್ನು ಹೊಂದಿತ್ತು. ಕೊರೊನಾ ಕೂಡ ಬಹುಪಾಲು ಇದೇ ಲಕ್ಷಣಗಳನ್ನು ಹೊಂದಿಕೊಂಡಿದೆ. ಹೀಗಾಗಿ, 21 ದಿನಗಳ ಗೃಹ ದಿಗ್ಬಂಧನವನ್ನು ಮೋದಿ ವಿಧಿಸಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು 21 ದಿನ ಬೇಕು

''21 ದಿನಗಳ ಕಾಲ ಮನೆಯಲ್ಲೇ ಇರಿ ಎಂದು ಮೋದಿ ಹೇಳಿರುವುದರ ಹಿಂದೆ ಒಂದು ಲಾಜಿಕ್ ಇದೆ. 14 ದಿನಗಳ ಇನ್ಕ್ಯುಬೇಷನ್ ಜೊತೆಗೆ ಉಳಿದ ಸೋಂಕು ಸಾಯಲು ಮತ್ತು ಸಂಪೂರ್ಣವಾಗಿ ಗುಣಮುಖರಾಗಲು ಇನ್ನೊಂದು ವಾರ ಕಾಲಾವಕಾಶ (21 ದಿನಗಳು) ಬೇಕು'' ಎಂದು ತಮಿಳುನಾಡು ಸಾರ್ವಜನಿಕ ಆರೋಗ್ಯ ನಿರ್ದೇಶಕರು ಹೇಳಿದ್ದಾರೆ.