‘ಲಾಕ್ ಡೌನ್’ ನಡುವೆ ಮಾರುಕಟ್ಟೆಗೆ ಜನರ ಆಗಮನ: ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ

‘ಲಾಕ್ ಡೌನ್’ ನಡುವೆ ಮಾರುಕಟ್ಟೆಗೆ ಜನರ ಆಗಮನ: ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ

ಬೆಂಗಳೂರು: ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ನಡುವೆ ಇಂದು ಯುಗಾದಿ ಹಬ್ಬವನ್ನು ಜನರು ದೇಶದ ಎಲ್ಲೆಡೆ ಆಚರಣೆ ಮಾಡುತ್ತಿದ್ದು ಹಬ್ಬದ ಸಲುವಾಗಿ ಬೇಕಾಗಿರುವ ದಿನಸಿ ಸಾಮಾನುಗಳನ್ನು ಕೊಂಡುಕೊಳ್ಳುವ ಸಲುವಾಗಿ ಸಾವಿರಾರು ಮಂದಿ ಜನತೆ ಮಾರುಕಟ್ಟೆಗೆ ಆಗಮಿಸುತ್ತಿದ್ದು ಜನರ ನಿಯಂತ್ರಣಕ್ಕೆ ಸ್ಥಳೀಯ ಪೊಲೀಸರು ಹರಸಾಹಸ ಪಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

144 ಸೆ ಜಾರಿಯಲ್ಲಿದ್ದರು ಕೂಡ ಜನತೆ ಅದಾವುದನ್ನು ಕೂಡ ಲೆಕ್ಕಸಿಸದೇ ಬೆಂಗಳೂರು, ಮಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗೆ ಆಗಮಿಸಿ, ಹೂವು, ಹಣ್ಣು. ಸೇರಿದಂತೆ ಹಬ್ಬಕ್ಕೆ ಬೇಕಾಗಿರುವ ಸಾಮಾನು ಖರೀದಿಯಲ್ಲಿ ತಲ್ಲಿನರಾಗಿದ್ದಾರೆ. ಇನ್ನು ಸೊಂಕು ಹೆಚ್ಚಳದ ಭೀತಿ ಕೂಡ ಹೆಚ್ಚಾಗುತ್ತಿದ್ದು, ಹೀಗೆ ಗುಂಪು, ಗುಂಪಾಗಿ ಜನತೆ ಸೇರಿಕೊಂಡ ವೇಳೇಯಲ್ಲಿ ಸೊಂಕು ಹೆಚ್ಚಾದರೇ ಅದಕ್ಕೆ ಯಾರು ಹೊಣೆ ಎನ್ನುವುದು ಈಗ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ನಮ್ಮ ಜನ ಹೀಗೆ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ.