ಇನ್ನು ವಿಮಾನದಲ್ಲಿ ಪ್ರಯಾಣಿಕರಿಗೆ ಪ್ರಿ-ಪ್ಯಾಕ್ಡ್ ಮೀಲ್ಸ್ ಸೌಲಭ್ಯ ಆರಂಭ; ಮಾಸ್ಕ್ ಧರಿಸದೇ ಇದ್ದರೆ ಪ್ರಯಾಣ ನಿರ್ಬಂಧ

ಇನ್ನು ವಿಮಾನದಲ್ಲಿ ಪ್ರಯಾಣಿಕರಿಗೆ ಪ್ರಿ-ಪ್ಯಾಕ್ಡ್ ಮೀಲ್ಸ್ ಸೌಲಭ್ಯ ಆರಂಭ; ಮಾಸ್ಕ್ ಧರಿಸದೇ ಇದ್ದರೆ ಪ್ರಯಾಣ ನಿರ್ಬಂಧ

ದೆಹಲಿ: ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಮುಂಚಿತವಾಗಿಯೇ ಪ್ಯಾಕ್ ಮಾಡಲ್ಪಟ್ಟ ಸ್ನ್ಯಾಕ್ಸ್, ಊಟ ಹಾಗೂ ಪಾನೀಯಗಳು ಹಾಗೂ ಅಂತರರಾಷ್ಟೀಯ ವಿಮಾನಗಳಲ್ಲಿ ಬಿಸಿ ಊಟವನ್ನು ನೀಡಲು ಸರಕಾರ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಆದರೆ ವಿಮಾನದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರ್ಯಾರಾದರೂ ಇದ್ದರೆ ಅವರಿಗೆ ವಿಮಾನಯಾನ ಸಂಸ್ಥೆ ಮುಂದೆ ವಿಮಾನ ಪ್ರಯಾಣಕ್ಕೆ ನಿರ್ಬಂಧ ಹೇರಬಹುದು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಮೇ 25ರಿಂದ ವಿಮಾನದಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ನಿಲ್ಲಿಸಲಾಗಿತ್ತು. ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮುಂಚಿತವಾಗಿಯೇ ಪ್ಯಾಕ್ ಮಾಡಲ್ಪಟ್ಟ ಕೋಲ್ಡ್ ಮೀಲ್ಸ್ ಮತ್ತು ಸ್ನ್ಯಾಕ್ಸ್ ಮಾತ್ರ ಒದಗಿಸಲಾಗುತ್ತಿತ್ತು.

ಪ್ರತಿ ಬಾರಿ ಪ್ರಯಾಣಿಕರಿಗೆ ಊಟ, ಸ್ನ್ಯಾಕ್ಸ್ ನೀಡಿದ ನಂತರ ಮತ್ತೆ ಹೊಸ ಕೈಗವಸನ್ನು ವಿಮಾನ ಪರಿಚಾರಕರು ಧರಿಸಬೇಕು, ಪ್ರಯಾಣದ ಆರಂಭಕ್ಕಿಂತ ಮುನ್ನ ಡಿಸ್ಪೋಸೇಬಲ್ ಇಯರ್ ಫೋನ್ಸ್ ಹಾಗೂ ಸ್ಯಾನಿಟೈಸ್ ಮಾಡಲ್ಪಟ್ಟ ಹೆಡ್ ಫೋನ್‍ಗಳನ್ನು ಪ್ರಯಾಣಿಕರಿಗೆ ಒದಗಿಸಲಾಗುವುದು ಹಾಗೂ ವಿಮಾನದಲ್ಲಿನ ಇನ್-ಫ್ಲೈಟ್ ಮನರಂಜನಾ ಸಿಸ್ಟಂ ಬಳಕೆಗೂ ಪ್ರಯಾಣಿಕರಿಗೆ ಅನುಮತಿ ನೀಡಲಾಗುವುದು.