ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಆಸ್ಟ್ರೇಲಿಯಾ ನಿರ್ಧರಿಸಬೇಕು: ಸಚಿನ್

ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಆಸ್ಟ್ರೇಲಿಯಾ ನಿರ್ಧರಿಸಬೇಕು: ಸಚಿನ್

ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಆಸ್ಟ್ರೇಲಿಯಾ ನಿರ್ಧರಿಸಬೇಕು: ಸಚಿನ್

ದೆಹಲಿ: ಮುಂಬರುವ ಟಿ20 ವಿಶ್ವಕಪ್ ಆಯೋಜನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾವೇ ನಿರ್ಧರಿಸಬೇಕು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಸರಕಾರ ಇತ್ತೀಚಿಗೆ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಾಮರ್ಥ್ಯದ ಶೇಕಡ 25ರಷ್ಟುಜನರಿಗೆ ಪ್ರವೇಶಾವಕಾಶ ನೀಡಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ ನಲ್ಲಿ ವಿಶ್ವಕಪ್ ಟೂರ್ನಿ ಆಯೋಜಿಸುವ ಭರವಸೆ ಮೂಡಿದೆ. ನಷ್ಟದ ಭೀತಿಯಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೂ ನಿರಾಳವಾಗುವ ಸಾಧ್ಯತೆ ಇದೆ.