ಮನುಕುಲದ ಅಸ್ತಿತ್ವಕ್ಕೇ ಕಂಟಕವಾಗುತ್ತಿದ್ದಾರೆ 'ವೈರಸ್ ಹರಡುವವರು’

ಮನುಕುಲದ ಅಸ್ತಿತ್ವಕ್ಕೇ ಕಂಟಕವಾಗುತ್ತಿದ್ದಾರೆ 'ವೈರಸ್ ಹರಡುವವರು’

ಜಾಗತಿಕ ಮಟ್ಟದಲ್ಲಿ 3,30,000 ಮಂದಿಗೆ ಬಾಧಿಸುತ್ತಿರುವುದಲ್ಲದೇ 14,687 ಜೀವಗಳನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್‌ನಿಂದಾಗಿ ಇಡೀ ಜಗತ್ತೇ ಲಾಕ್‌ಡೌನ್ ಆಗಿದೆ.

ಇಂಥ ಸಂದಿಗ್ಧ ಸನ್ನಿವೇಶದಲ್ಲಿ ತಂತಮ್ಮ ದೇಶಗಳ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಉಲ್ಲಂಘನೆ ಮಾಡಿ, ಮೋಜು ಮಸ್ತಿಯಲ್ಲಿ ತೊಡಗುತ್ತಿರುವ ವೈರಸ್‌ ರೆಬೆಲ್‌ಗಳು ಖುದ್ದು ತಮ್ಮದೇ ಹಾಗೂ ತಮ್ಮ ಸುತ್ತಲಿನ ಮಂದಿಯ ಜೀವಗಳಿಗೂ ಸಂಚಕಾರ ತರುತ್ತಿದ್ದಾರೆ.

ಜರ್ಮನಿ, ಸ್ಪೇನ್, ಫ್ರಾನ್ಸ್, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಎಲ್ಲೆಡೆಯೂ ಇಂಥ ಮುಠ್ಠಾಳತನ ಪರಮಾವಧಿಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಇಡೀಯ ಮನುಕುಲ ತನಗೆ ತಾನೇ ಗಂಡಾಂತರ ತಂದುಕೊಳ್ಳುತ್ತಿದೆ ಎನ್ನುವ ಭೀತಿಯನ್ನು ಮೂಡಿಸುತ್ತಿದ್ದಾರೆ.

ಕೊರೋನಾ ಪಾರ್ಟಿಗಳನ್ನು ಆಯೋಜಿಸಿಕೊಂಡು, ವೃದ್ಧರತ್ತ ಕೆಮ್ಮುವುದು, ಬೀಚ್‌ಗಳಲ್ಲಿ ಮೋಜು ಮಸ್ತಿ ಮಾಡುವುದು, ಹಾಲಿಡೇಯಿಂಗ್ ಮಾಡುವ ಮೂಲಕ ಹೊಸ ಹೊಸ ಜಾಗಗಳಿಗೆ ರೋಗವನ್ನು ತಲುಪಿಸುವ ಕೆಲಸಕ್ಕೆ ಮುಂದಾಗುತ್ತಿರುವ ಈ ಸಮೂಹ ಎಲ್ಲ ದೇಶಗಳಲ್ಲೂ ಇದ್ದು, ಇಂಥವರನ್ನು ಮಟ್ಟ ಹಾಕುವುದು ಬಹಳ ಕಷ್ಟವಾಗಿಬಿಟ್ಟಿದೆ.

ಈ ವೈರಸ್‌ ಹರಡುವವರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹಾಗೂ ಭದ್ರತಾ ಏಜೆನ್ಸಿಗಳ ಸಿಬ್ಬಂದಿ ಬಹಳ ಹರಸಾಹಸ ಪಡುತ್ತಿದ್ದಾರೆ.