ಕೊರೋನಾ ಆತಂಕ : ಹಳ್ಳಿ ಜನರ ನೆರವಿಗೆ ನಿಂತ ನಟ ವಿನೋದ್‌ ರಾಜ್‌

ಕೊರೋನಾ ಆತಂಕ : ಹಳ್ಳಿ ಜನರ ನೆರವಿಗೆ ನಿಂತ ನಟ ವಿನೋದ್‌ ರಾಜ್‌

ದೇಶವ್ಯಾಪಿ ಹಬ್ಬಿರುವ ಕೊರೋನಾ ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದೆ. ಅದರಲ್ಲಿಯೂ ನಗರಗಳನ್ನು ನಡುಗಿಸಿಬಿಟ್ಟಿದೆ ಈ ಮಹಾಮಾರಿ ಕೊರೋನಾ ಕೆಲವರು ನಗರದಿಂದ ತಪ್ಪಿಸಿಕೊಂಡು ಹಳ್ಳಿಗಳಿಗೆ ಬಂದಿದ್ದಾರೆ ಹೀಗಾಗಿ ಹ‍‍ಳ್ಳಿಗಳಲ್ಲೂ ಈ ಮಹಾಮಾರಿ ಹಬ್ಬುವ ಸಾಧ್ಯತೆ. ಇರುವುದರಿಂದ ಹಳ್ಳಿಗಳನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ.

ನಟ ವಿನೋದ್‌ ರಾಜ್ ಸಹ ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೌದು ಸಿನಿಮಾದಿಂದ ದೂರವಿರುವ ವಿನೋದ್‌ ತಾಯಿ ಲೀಲಾವತಿ ಜೊತೆ ಹ‍ಳ್ಳಿಯಲ್ಲಿ ಬದುಕುತ್ತಿರುವುದು ಹಲವರಿಗೆ ತಿಳಿದಿದೆ ಈಗ ಕೊರೋನಾ ಭೀತಿ ಇರುವುದರಿಂದ ಅವರು ತಮ್ಮ ಹಳ್ಳಿಯ ಸುರಕ್ಷತೆಗೆ ನೆರವಾಗಿದ್ದಾರೆ.

ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆ ನಿಂತಿರುವ ವಿನೊದ್‌ ರಾಜ್‌ ತಮ್ಮ ತೋಟಕ್ಕೆ ಬಳಸುವ ಕ್ರಿಮಿ ನಾಶಕವನ್ನೇ ಊರಿನಲ್ಲಿ ಸಿಂಪಡಿಸಿದ್ದಾರೆ ತಮ್ಮದೇ ಟ್ರಾಕ್ಟರ್‌ ಸ್ಟ್ರೇಯರ್‌ ಗಳನ್ನು ಬಳಸಿ ಹಳ್ಳಿಯ ಸ್ವಚ್ಚತೆಯ ಕಾರ್ಯ ಮಾಡುತ್ತಿದ್ದಾರೆ.

ನಟ ವಿನೋದ್‌ ರಾಜ್‌ ಮತ್ತು ತಾಯಿ ಲೀಲಾವತಿ ಸಿನಿಮಾ ರಂಗದಿಂದ ದೂರಾಗಿ ಹಳ್ಳಿಯಲ್ಲಿ ಸ್ವಚ್ಚಂದ ಬದುಕು ನಡೆಸುತ್ತಿದ್ದಾರೆ ವಿನೋದ್‌ ರಾಜ್‌ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಿನಿಮಾದಿಂದ ದೂರವಿರುವ ನಟ ವಿನೋದ್‌ ರಾಜ್‌ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮುಖವಾಡ ಎಂಬ ಸಿನಿಮಾದಲ್ಲಿ ಸ‍ಣ್ಣ ಪಾತ್ರಕ್ಕಾಗಿ ಚಿತ್ರತಂಡವು ವಿನೋದ್‌ ರಾಜ್‌ ಅವರನ್ನು ಒಪ್ಪಿಸಿದೆ.