ಸೀರಿಯಲ್ ನಟಿ ಮೊಹೇನಾ ಕುಮಾರಿ ಸಿಂಗ್ ಕುಟುಂಬಕ್ಕೆ ಕೊರೊನಾ ಕಂಟಕ

ಸೀರಿಯಲ್  ನಟಿ ಮೊಹೇನಾ ಕುಮಾರಿ ಸಿಂಗ್ ಕುಟುಂಬಕ್ಕೆ ಕೊರೊನಾ ಕಂಟಕ

ಕೊರೊನಾ ಮಹಾಮಾರಿ ದೇಶದ ಜನರನ್ನು ತಲ್ಲಣಗೊಳಿಸಿದ್ದು ಸುಳ್ಳಲ್ಲ. ಈಗ ಹಿಂದಿ ಸಿರಿಯಲ್ ಎ ರಿಷ್ತಾ ಕ್ಯಾ ಕೆಹ್ಲಾತಾ ಹೈ ನಲ್ಲಿ ನಟಿಸುತ್ತಿದ್ದ ಮೊಹೆನಾ ಕುಮಾರಿ ಸಿಂಗ್ ಅವರ ಕುಟುಂಬದಲ್ಲಿ ಅವರನ್ನು ಸೇರಿದಂತೆ ಒಟ್ಟು 5 ಜನರು ಈ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಉತ್ತರಖಾಂಡದ ರಿಷಿಕೇಶದಲ್ಲಿರುವ ಕೊರೊನಾ ನಿಗದಿತ ಆಸ್ಪತ್ರೆಯಲ್ಲಿ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ವತಃ ನಟಿ ಮೊಹೆನಾ ಕುಮಾರಿ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಹಾಗೂ ನಾವೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.