ಕೊರೋನಾ ಸೋಂಕು ಜಗತ್ತಿನಾದ್ಯಂತ 5000 ಸಾವು

ಕೊರೋನಾ ಸೋಂಕು ಜಗತ್ತಿನಾದ್ಯಂತ 5000 ಸಾವು

ಬೀಜಿಂಗ್ : ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. ಕೊರೋನಾ ಸೋಂಕಿ ಜಗತ್ತಿನಾದ್ಯಂತ ಸದ್ಯ5000 ಸಾವನ್ನಪ್ಪಿದ್ದರೆ.

ಭಾರತ ಸೇರಿ ಒಟ್ಟು 125 ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಕರ್ನಾಟಕಕ್ಕೂ ಕೊರೊನಾ ವೈರಸ್ ಕಾಲಿಟ್ಟಿದೆ . ಕಲಬುರಗಿಯಲ್ಲಿ ಓರ್ವ ಸಾವನ್ನಪ್ಪುವ ಮೂಲಕ ದೇಶದಲ್ಲಿ ಮೊದಲ ಸಾವಿನ ಪ್ರಕರಣ ದಾಖಲಾಗಿದೆ . ಭಾರತದಲ್ಲಿ ಶುಕ್ರವಾರ ಮತ್ತೆ 5 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ವೈರಸ್ ಪೀಡಿತರ ಸಂಖ್ಯೆ 88 ಕ್ಕೆ ತಲುಪಿದೆ.

ವಿಶ್ವಾದ್ಯಂತ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರೆಗೆ ವಿಶ್ವದಾದ್ಯಂತ 139,000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.