ಮಧ್ಯಪ್ರದೇಶ ಸರ್ಕಾರದ  ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ

ಮಧ್ಯಪ್ರದೇಶ ಸರ್ಕಾರದ  ಪತನಕ್ಕೆ  ಕಾರಣರಾದ  ಕಾಂಗ್ರೆಸ್ ಶಾಸಕರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ

ಬೆಂಗಳೂರು: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ  ಪತನಕ್ಕೆ ಕಾರಣರಾದ ವೈಟ್ ಫೀಲ್ಡ್   ಆದರ್ಶ ಹೋಟೆಲ್ ನಲ್ಲಿರುವ ಕಾಂಗ್ರೆಸ್  ಆರು ಸಚಿವರು ಮತ್ತು 11 ಶಾಸಕರು ಸೂಕ್ತ ಭದ್ರತೆ ನೀಡುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಿದ್ಧಪಡಿಸಿಕೊಂಡಿರುವ ತಮ್ಮ ಮೇಲೆ ದಾಳಿ ಆಗಬಹುದು ಎನ್ನುವ ಆತಂಕದಿಂದ ಪೊಲೀಸರ ಮೊರೆ ಹೋಗಿದ್ದಾರೆ. ತಾವು ಸ್ವಯಂ ಪ್ರೇರಣೆಯಿಂದ ಮಹತ್ವದ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ  ಮನವಿ ಮಾಡಿಕೊಂಡಿದ್ದಾರೆ.