ಬಣ್ಣದ ಬದುಕು

ಬಣ್ಣದ ಬದುಕು

ಮಹದೇವ ಸಿ ಕೋಣನೂರು

 

ಬಣ್ಣದಲ್ಲೇ ಬದುಕು ಕಳೆದರು

ಬದುಕಿಗೆ ಬಣ್ಣ ತುಂಬಾಲಾಗುತ್ತಿಲ್ಲ.

 

ಇಷ್ಟಾರ್ಥಗಳನ್ನು ಪೂರೈಸುವ ದೇವಿಯನ್ನೇ ರೂಪಿಸುತ್ತಿದ್ದರು.

ಹೊಟ್ಟೆಯನ್ನೇ ತುಂಬಿಸಿಕೊಳ್ಳಲಾಗುತ್ತಿಲ್ಲ.

 

ನಾನೇ  ಕೈಯಾರ ಬಣ್ಣ ತುಂಬಿದ

ದೇವಿ ಗರ್ಭ ಗುಡಿಯೊಳು ಮಿಂಚುತ್ತಿರೆ,

ಪ್ರವೇಶವಿಲ್ಲದ ಆ ಗುಡಿಯ ಹೊರಗೆ

ನಾ ನಿಂತು ನೋಡುತ್ತಿರೆ.

ಏನೇಳಲಿ ನಾ....?