ಕಾಫಿ ಡೇ ಕತೆ

ಕಾಫಿ ಡೇ ಕತೆ

ಕಾಫಿ ಕಿಂಗ್ ಎನಿಸಿಕೊಂಡಿದ್ದ ಸಿದ್ದಾರ್ಥ ಸಾವಿಗೀಡಾಗಿ ಹದಿನೈದು ದಿನ ಕಳೆದರೂ, ತನಿಖಾ ಪ್ರಗತಿ ಬಗ್ಗೆ ನಿಖರ ಮಾಹಿತಿಗಳಿಲ್ಲ.

ಇವರು ನಡೆಸುತ್ತಿದ್ದ ಕಾಫಿ ಡೇ, ರಿಯಲ್ ಎಸ್ಟೇಟ್, ಹಣಕಾಸು ಸಂಸ್ಥೆ, ಐಟಿ ಸಂಸ್ಥೆ, ಹೋಟೆಲ್ ಮತ್ತು ರೆಸಾರ್ಟ್, ವಿದ್ಯಾಸಂಸ್ತೆ ಸೇರಿದಂತೆ ಒಟ್ಟು 52 ಉದ್ಯಮ ಘಟಕಗಳು 7653 ಕೋಟಿ ರು.ಗಳಷ್ಟು ಸಾಲ ಮಾಡಿಕೊಂಡಿದ್ದವು. ಇದರಲ್ಲಿ 1106 ಕೋಟ ಅಲ್ಪಾವಧಿ ಸಾಲಗಳೂ ಇದ್ದವು. ಇಷ್ಟು ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವುದಕ್ಕಾಗಿ ಗ್ಲೋಬಲ್ ವಿಲೇಜ್ ಟೆಕ್ನಾಲಜಿ ಘಟಕ ಮಾರಲು ಮುಂದಾಗಿದೆ.

ಅಮೆರಿಕ ಮೂಲದ ಸಂಸ್ಥೆಗೆ 2600 ಕೋಟಿ ರುಗಳಿಂದ 3000 ಕೋಟಿ ರು.ಗಳವರೆಗೆ 90 ಎಕರೆ ಪ್ರದೇಶ ವ್ಯಾಪ್ತಿಯಿರುವ ಗ್ಲೋಬಲ್ ವಿಲೇಜ್ ಮಾರಾಟದ ಪ್ರಸ್ತಾಪ ಸಲ್ಲಿಸಿದ್ದು, ಮೂರು ತಿಂಗಳೊಳಗೆ ಮಾರಾಟ ಪ್ರಕ್ರಿಯೆ ಮುಗಿಯುವ ನಿರೀಕ್ಷೆಗಳಿವೆ.