ಮಕ್ಕಳು ಮಾತು ಕೇಳುವುದಿಲ್ಲ, ಆದರೆ ಅನುಸರಿಸುತ್ತಾರೆ…!

ಮಕ್ಕಳು ಮಾತು ಕೇಳುವುದಿಲ್ಲ, ಆದರೆ ಅನುಸರಿಸುತ್ತಾರೆ…!

ಒಂದು ಮಗು ತನ್ನ ದೈನಂದಿನ ಚಟುವಟಿಕೆಯನ್ನು ತನ್ನ ತಾಯಿಂದ ನೋಡಿ ಕಲಿಯುದು ವಾಡಿಕೆ. ಅಲ್ಲಿಂದ ತಮ್ಮ ತಂದೆ, ಬಂಧು/ಬಳಗದವರ ನಡವಳಿಕೆಯನ್ನು ನೋಡಿ ನೋಡಿ ಕಲಿಯುತ್ತಾರೆ..

ಇದಕ್ಕೆ ಉತ್ತರ ನೀಡುವಂತೆ ಇತ್ತೀಚಿನ ದಿನಗಳಲ್ಲಿ ಕೇಳಿದ ಒಂದು ಕಥೆ ನೆನಪಾಗುತ್ತದೆ. ಅದೇನೆಂದರೆ ಎಂಟು ವರ್ಷದ ಮಗುವೊಂದಿಗೆ ಮಹಿಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅಮ್ಮ ಮತ್ತು ಮಗು ಇಬ್ಬರೂ ಪುಸ್ತಕ ಓದುತ್ತಿದ್ದರು. ಇದನ್ನು ಪಕ್ಕದಲ್ಲಿ ಕೂತಿದ್ದ ಮುದುಕನೊಬ್ಬ ಗಮನಿಸಿ  ಕೇಳಿದ,  ಅಮ್ಮ… ಇವತ್ತಿನ ಜಗತ್ತಿನಲ್ಲಿ ಮಕ್ಕಳು ಮೊಬೈಲ್‍ ಮತ್ತು ಟ್ಯಾಬ್‍ನಲ್ಲಿ ಆಡುತ್ತ ಅದರಲ್ಲಿ ಮುಳುಗಿರುತ್ತಾರೆ. ಆದರೆ  ನಿಮ್ಮ ಮಗು ಪುಸ್ತಕ ಓದುತ್ತಿದ್ದಾರೆ. ನಿಮ್ಮ ಯಾವ ಮಾತಿನಿಂದ ಮಗುವಿನಲ್ಲಿ ಇಷ್ಟೊಂದು ಬದಲಾವಣೆ ಸಾಧ್ಯವಾಯಿತ್ತು..? ಎಂದು.

ಇದಕ್ಕೆ ಮಹಿಳೆಯ ಉತ್ತರ ಹೀಗೆ ಇತ್ತು… ಮಕ್ಕಳು ನಮ್ಮ ಮಾತು ಕೇಳುವುದಿಲ್ಲ ಆದರೆ ನಮ್ಮನ್ನು ಅನುಸರಿಸುತ್ತಾರೆ ಎಂದು ಹೇಳುತ್ತಾರೆ.

ಈ ಮಾತು ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಮಕ್ಕಳು ಮಾತು ಕೇಳಿವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಮೊಬೈಲ್‍ ದಾಸರಾಗಿ ಮಾಡಿ ಬಿಡುತ್ತೇವೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್‍ ಫೋನ್‍ ಇಲ್ಲದಿದ್ದರೆ ಯಾರಿಗೂ ಕೈ ಕಾಲು ಆಡುವುದಿಲ್ಲ.  ಆದರೆ ಈ ಮೊಬೈಲ್  ಪೋನ್‍ ನಿಂದ  ಎಷ್ಟೊ ಮಕ್ಕಳು ತಮ್ಮ ಬಾಲ್ಯದ ಸಿಹಿ ಘಟನೆಯನ್ನು ಕಳೆದು ಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಜೀವನ ಶೈಲಿಯೂ ಬಾರಿ ಪ್ರಮಾಣದಲ್ಲಿ ಬದಲಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಆನ್‍ಲೈನ್‍ ಗೇಮ್‍ಗಳ ಹಾವಳಿ ಜಾಸ್ತಿಯಾಗಿದ್ದೆ. ಅಲ್ಲದೆ ಯುವಕರು ಇಂತಹ ಆನ್‍ಲೈನ್‍ ಗೇಮ್‍ಗಳ ಮೊರೆ ಹೊಗಿದ್ದು, ಅವುಗಳನ್ನು ಹೆಚ್ಚು   ಅವಲಂಬನೆಯಾಗುತ್ತಿದ್ದಾರೆ. ಕೆಲ ಯುವಕರು ಮತ್ತು ಯುವತಿಯರು ಗೇಮ್‍ಗಳಿಲ್ಲದೆ ತಮ್ಮ ದೈನಂದಿನ ಚಟುವಟಿಕೆಯನ್ನು ಆರಂಭಿಸದಷ್ಟು ಅವಲಂಬನೆಯಾಗಿರುತ್ತಾರೆ. ಇದಕ್ಕೆ ಕಾರಣಗಳು ಅನೇಕ ಇರಬಹುದು….

ಆದರೆ ಈ ವಿಚಾರದಲ್ಲಿ ತಂದೆ ತಾಯಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹೌದು ತಮ್ಮ  ಒತ್ತಡದ ಜೀವನದಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಳುತ್ತಿರುವ ಮಗುವನ್ನು ಸಮಾದಾನ ಮಾಡಲು ಸಮಯ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸ್ಮಾರ್ಟ್‍ ಪೋನ್‍ಗಳನ್ನು ನೀಡಿ ಸಮಾಧಾನ ಮಾಡುವ ಸುಲಭ ಉಪಾಯ ಹುಡುಕಿಕೊಂಡಿದ್ದಾರೆ. ಆದರೆ ಇದೆ ಮುಂದೆ ಮಕ್ಕಳಿಗೆ ಮುಳ್ಳಾಗಿ ಪರಿಣಮಿಸುತ್ತದೆ ಎಂದು ಪೋಷಕರು ತಿಳಿಯಬೇಕು. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ … ಎಂಬ ಗಾದೆಯೇ ಹೇಳುವಂತೆ ಮಕ್ಕಳನ್ನು ಚಿಕ್ಕಂದಿನಿಂದಲ್ಲೆ ಸರಿಯಾದ ದಾರಿಯಲ್ಲಿ ನಡೆಸಿಕೊಳ್ಳಬೇಕು… ಆ ಸಮಯದಲ್ಲಿ ಸುಮ್ಮನಿದ್ದು ಅವರು ದೊಡ್ಡವರಾದ ಮೇಲೆ ಅವರ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸಿದರೇ ಮುಂದೆ ಅದು ಕಠೋರವಾದ  ಅಂತ್ಯವನ್ನು ಕಂಡು ಕೊಳ್ಳುತ್ತಾರೆ.