‘ಚಲೋ ಆತ್ಮಕೂರ್’ ಹಿನ್ನೆಲೆ: ಆಂಧ್ರ ಮಾಜಿ ಮುಖ‍್ಯಮಂತ್ರಿ ಚಂದ್ರಬಾಬು ನಾಯ್ಡು ಗೃಹಬಂಧನ

‘ಚಲೋ ಆತ್ಮಕೂರ್’ ಹಿನ್ನೆಲೆ: ಆಂಧ್ರ ಮಾಜಿ ಮುಖ‍್ಯಮಂತ್ರಿ ಚಂದ್ರಬಾಬು ನಾಯ್ಡು ಗೃಹಬಂಧನ

ಹೈದರಾಬಾದ್: ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಸರ್ಕಾರದ ವಿರುದ್ಧ ಹಮ್ಮಿಕೊಂಡ 'ಚಲೋ ಆತ್ಮಕೂರ್’ ಪ್ರತಿಭಟನೆಗೆ ಪ್ರತಿಯಾಗಿ ಹಾಗೂ ಮುಂಜಾಗ್ರತೆ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ತೆಲುಗು ದೇಶಂ ಪಕ್ಷದ ಇತರೆ ಮುಖಂಡರನ್ನು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ ಗೃಹಬಂಧನದಲ್ಲಿರಿಸಿದೆ.

ಬಂಧಿತರ ಪೈಕಿ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಸೇರಿದ್ದಾರೆ. ಆಡಳಿತಾರೂಢ ವೈಎಸ್ ಆರ್ ಸಿಪಿ ಪಕ್ಷವು ದ್ವೇಷದ ರಾಜಕಾರಣ ಮಾಡುತ್ತಿದೆ. ಟಿಡಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಹಲ್ಲೆ ಹಾಗೂ ಸುಳ್ಳು ಪ್ರಕರಣಗಳಿಗೆ ಬಲಿಯಾದ ಸುಮಾರು 127 ಕುಟುಂಬಗಳು ಗುಂಟೂರಿನ ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಟಿಡಿಪಿ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ “ಚಲೋ ಆತ್ಮಕೂರ್’ ಹಮ್ಮಿಕೊಳ್ಳಲಾಗಿತ್ತು.