ಬೆಂಗಳೂರು: ಮಳೆಯಿಂದಾಗಿ ನವೀಕರಣಕ್ಕೆ ಬಳಸಿದ್ದ ಸೆಂಟ್ರಿಂಗ್ ಸ್ಟೇರ್ಸ್ ಕುಸಿದು ಕಾರುಗಳು ಜಖಂ

ಬೆಂಗಳೂರು: ಮಳೆಯಿಂದಾಗಿ ನವೀಕರಣಕ್ಕೆ ಬಳಸಿದ್ದ ಸೆಂಟ್ರಿಂಗ್ ಸ್ಟೇರ್ಸ್ ಕುಸಿದು ಕಾರುಗಳು ಜಖಂ

ಬೆಂಗಳೂರು: ಬುಧವಾರ ಸಂಜೆ ಸುರಿದ ಮಳೆಗೆ ನಗರದ ಟ್ರಿನಿಟಿ ವೃತ್ತದ ಬಳಿ ಇರುವ ಲಿಡೋ ಮಾಲ್‌ನಲ್ಲಿ ನವೀಕರಣಕ್ಕೆ ಬಳಸಿರುವ ಸೆಂಟ್ರಿಂಗ್‌ ಸ್ಟೇರ್ಸ್‌(ಅಟ್ಟಳಿಗೆ) ಧರೆಗುರುಳಿದ್ದು ಕೆಳಗೆ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ.

ಅಟ್ಟಳಿಗೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣದಿಂದ ಸಾಧಾರಣ ಮಳೆಗೇ ಧರೆಗುರುಳಿದೆ ಎನ್ನಲಾಗಿದೆ. ಕಬ್ಬಿಣದ ರಾಡುಗಳನ್ನು ಬಳಸಿ ನಿರ್ಮಿಸಿರುವ ಅಟ್ಟಳಿಗೆ ಕುಸಿದಾಗ ಪಕ್ಕದ ಕಟ್ಟಡ ಹಾಗೂ ಕೆಳಗೆ ನಿಲ್ಲಿಸಿದ್ದ ಕೆಲವು ಕಾರುಗಳಿಗೆ ಹಾನಿ ಉಂಟಾಗಿದೆ. ಈ ಘಟನೆಯಲ್ಲಿ ಯಾರಿಗೂ ಪ್ರಾಣಾಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಹಲಸೂರು ಠಾಣೆ ಪೊಲೀಸರು ಮತ್ತು ಟ್ರಾಫಿಕ್‌ ಪೊಲೀಸರು ಕಬ್ಬಿಣದ ರಾಡುಗಳನ್ನು ತೆರವುಗೊಳಿಸಿದ್ದಾರೆ.