‘ಹಿಂಸಾಚಾರದ ವೇಳೆ ಸಿ ಆರ್ ಪಿ ಎಫ್ ಸಿಬ್ಬಂದಿ ಇಲ್ಲದಿದ್ದರೆ ನಾನು ಬದುಕುತ್ತಿರಲ್ಲಿ’: ಅಮಿತ್ ಶಾ

‘ಹಿಂಸಾಚಾರದ ವೇಳೆ ಸಿ ಆರ್ ಪಿ ಎಫ್ ಸಿಬ್ಬಂದಿ ಇಲ್ಲದಿದ್ದರೆ ನಾನು ಬದುಕುತ್ತಿರಲ್ಲಿ’:  ಅಮಿತ್ ಶಾ

ದೆಹಲಿ: “ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ವಾತಾವಾರಣವನ್ನು ತೃಣಮೂಲ ಕಾಂಗ್ರೆಸ್‍ ಪಕ್ಷ ಸೃಷ್ಟಿಸಿದ್ದು. ಹಿಂಸಾಚಾರದ ವೇಳೆ ಕೇಂದ್ರಿಯ ಪೋಲಿಸ್ ಮೀಸಲು ಪಡೆ(ಸಿ ಆರ್ ಪಿ ಎಫ್‍) ಸಿಬ್ಬಂದಿ ಇಲ್ಲದಿದ್ದರೆ ನಾನು ಬದುಕುತ್ತಿರಲ್ಲಿಲ್ಲ” ಎಂದು ಭಾರತೀಯ ಜನತಾ ಪಾರ್ಟಿ ಮುಖ್ಯಸ್ಥ ಅಮಿತ್‍ ಶಾ ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, 2019ರ ಲೋಕಸಭಾ ಚುನಾವಣೆ ವೇಳೆ ಪ.ಬಂಗಾಳದಲ್ಲಿ ನಡೆದ ಹಿಂಸಾಚಾರದ ಹಿಂದೆ ತೃಣಮೂಲ ಕಾಂಗ್ರೆಸ್‍ ಪಕ್ಷ ಇದೆ, ಕಳೆದ 6 ಹಂತದ ಮತದಾನದ ವೇಳೆ ಎಲ್ಲಿಯೂ ಹಿಂಸಚಾರ ನೆಡದಿಲ್ಲಾ, ನಾವು ಎಲ್ಲಾ ರಾಜ್ಯದಲ್ಲೂ ಚುನಾವಣಾ ಪ್ರಚಾರ ನಡೆಸಿದ್ದೇವೆ, ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾಚಾರ ನಡೆದಿದೆ, ಇದಕ್ಕೆ ಬಿಜೆಪಿ ಹೊಣೆಯಲ್ಲ ಬಂಗಾಳದ ಆಡಳಿತ ಪಕ್ಷ ಕಾರಣ ಎಂದು  ಹೇಳಿದ್ದಾರೆ.

‘ನೀವು ಕೇವಲ 42 ಕ್ಷೇತ್ರ ಗೆಲ್ಲಲು ಹೋರಾಟ ಮಾಡುತ್ತಿದ್ದೀರಿ, ಆದರೆ ನಾವು ದೇಶದಾದ್ಯಂತ ಹೋರಾಟ ಮಾಡುತ್ತಿದ್ದೇವೆ, ನಾವು ಯಾವತ್ತು ಹಿಂಸಾಚಾರವನ್ನು ಬಯಸಿಲ್ಲ ಎಂದು ಮಮತಾ ಬ್ಯಾನರ್ಜಿ ವಿರುದ್ದ ಅಮಿತ್‍ ಶಾ ಕಿಡಿಕಾರಿದ್ದಾರೆ.