ಸಿಎಎ ಸಂಬಂಧಿಸಿದ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯಬಾರದು; ಮಹಾರಾಷ್ಟ್ರ ಸರ್ಕಾರ

ಸಿಎಎ ಸಂಬಂಧಿಸಿದ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯಬಾರದು; ಮಹಾರಾಷ್ಟ್ರ ಸರ್ಕಾರ

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು  ವಿಚಾರದಲ್ಲಿ ಯಾವುದೇ ಚಟುವಟಿಕೆಗಳನ್ನು ಶಾಲಾ ಆವರಣಗಳಲ್ಲಿ ನಡೆಸುವಂತಿಲ್ಲ ಎಂದು ಶಿವಸೇನೆ ನೇತೃತ್ವದ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ಶಾಲೆಗಳಿಗೆ ಆದೇಶ ನೀಡಿದೆ. 

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಿಜೆಪಿಯು  ಬೆಂಬಲ ಘೋಷಿಸುವ ಕಾರ್ಯಕ್ರಮಗಳನ್ನು ಮುಂಬೈ ಶಾಲೆಯಲ್ಲಿ ಆಯೋಜಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಇಂತದೊಂದು ತೀರ್ಮಾನಕ್ಕೆ ಬಂದಿದ್ದಾರೆ. 

ಮಹಾರಾಷ್ಟ್ರದ  ಶಿಕ್ಷಣ ಸಚಿವ ವರ್ಷಾ ಯಾವುದೇ ರಾಜಕೀಯ ಸಭೆಗಳೂ ಶಾಲೆಗಳಲ್ಲಿ ಏರ್ಪಡಿಸಬಾರದು ಎಂದು ಹೇಳಿದ್ದಾರೆ.