‘ನನ್ನ ದೃಷ್ಟಿಯಲ್ಲಿ ಬಿ ಎಸ್‍ ಯಡಿಯೂರಪ್ಪ ಮುಖ್ಯಮಂತ್ರಿ’: ಹಾಸ್ಯ ನಟ ಬಾಬು ಮೋಹನ್‍

‘ನನ್ನ ದೃಷ್ಟಿಯಲ್ಲಿ ಬಿ ಎಸ್‍ ಯಡಿಯೂರಪ್ಪ ಮುಖ್ಯಮಂತ್ರಿ’: ಹಾಸ್ಯ ನಟ ಬಾಬು ಮೋಹನ್‍

ಚಿಂಚೋಳಿ : "ನನ್ನ ದೃಷ್ಟಿಯಲ್ಲಿ ಬಿ ಎಸ್‍ ಯಡಿಯೂರಪ್ಪನವರೇ ಮುಖ್ಯಮಂತ್ರಿ, ನಾನು ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯುವುದಿಲ್ಲ" ಎಂದು ತೆಲಗು ಹಾಸ್ಯ ನಟ ಬಾಬು ಮೋಹನ್‍ ಹೇಳಿದ್ದಾರೆ.

ಇಂದು ಚಿಂಚೋಳಿಯ ಕುಂಚಾವರಂನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ಜಾಧವ್ಅವರ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಬಾಬು ಅವರು, 'ನಾನು ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಲು ಇಷ್ಟವಿಲ್ಲ, ಹಾಗಾಗಿ ನಾನು ಸಿಎಂಯೆಂದೇ ಕರೆಯುತ್ತೇನೆ. ಅವರ ನಾಯಕತ್ವದಲ್ಲಿ ಪಕ್ಷ ಗೆಲ್ಲಿಸಿದರೆ ರಾಜ್ಯದ ಅಭಿವೃದ್ದಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಸಭೆಯಲ್ಲಿ ಮಾಜಿ ಶಾಸಕ ಸೋಮಣ್ಣ, ಉಮೇಶ್‍ ಯಾದವ್‍ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು, ತೆಲಗು ಮತದಾರರನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿಯು ಬಾಬು ಮೋಹನ್‍ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಸಿಕೊಂಡಿದೆ.