ತೈಲ ಸಂಸ್ಥೆಯಿಂದ ಸರ್ಕಾರೀ ಹಣಕ್ಕೆ ಕತ್ತರಿ: ದೇಶ ಪ್ರೇಮಿಗಳ ಬಂಡವಾಳ ಹೊರ ಬರುವುದು ಖಾತರಿ

ತೈಲ ಸಂಸ್ಥೆಯಿಂದ ಸರ್ಕಾರೀ ಹಣಕ್ಕೆ ಕತ್ತರಿ: ದೇಶ ಪ್ರೇಮಿಗಳ ಬಂಡವಾಳ ಹೊರ ಬರುವುದು ಖಾತರಿ

ಇಡೀ ರಾಷ್ಟ್ರದಲ್ಲಿ 249.4 ಮೆಟ್ರಿಕ್ ಟನ್ ಆಷ್ಟು ತೈಲ ಶುದ್ಧೀಕರಣ ಘಟಕಗಳು, 65,554 ಪೆಟ್ರೋಲ್ ಬಂಕ್ ಗಳು, 24,026 ಅಡುಗೆ ಅನಿಲ ವಿತರಕರಿದ್ದಾರೆ. ಇದರಲ್ಲಿ 38.3 ಮಿಲಿಯನ್ ಟನ್ ಅಷ್ಟು ತೈಲ ಶುದ್ದೀಕರಣ, 15,076 ಬಂಕ್ ಗಳು, 6004 ಅಡುಗೆ ಅನಿಲ ವಿತರಣಾ ಕೇಂದ್ರಗಳನ್ನ ಹೊಂದಿರುವುದು ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಇವೆ.

ರಾಯಲ್ ಡಚ್ಷೆಲ್, ಬರ್ಮಾ ಆಯಿಲ್ ಕಾರ್ಪೊರೇಷನ್, ಭಾರತದ ಏಷ್ಯಾ ಟಿಕ್ ಪೆಟ್ರೋಲಿಯಂ ಈ ಮೂರೂ ಸೇರಿ 1920 ರಲ್ಲಿ ಬರ್ಮಾಷೆಲ್ಸ್ ಸ್ಥಾಪಿಸಿದ್ದವು. ಇದನ್ನೆ 1976 ರಲ್ಲಿ ರಾಷ್ಟ್ರೀಕರಣಗೊಳಿಸಿ ಬಿಪಿಸಿಎಲ್ ಎಂದಾಗಿಸಿತು, ಇದರಲ್ಲಿ ಕೇಂದ್ರದ ಬಂಡವಾಳ ಶೇ.53.3 ರಷ್ಟಿದೆ. ಅಂದರೆ ಈ ಸಂಸ್ಥೆಯ 1.11 ಲಕ್ಷ ಕೋಟಿ ಆಸ್ತಿಯಲ್ಲಿ ಕೇಂದ್ರದ ಪಾಲು 60 ಸಾವಿರ ಕೋಟಿರುಗಳಾಗುತ್ತೆ. ಮುಂಬೈ, ಕೇರಳದ ಕೊಚ್ಚಿ, ಮಧ್ಯಪ್ರದೇಶದ ಬಿನಾ, ಅಸ್ಸಾಂನ ನುಮಾಲಿಗರ್ ನಲ್ಲಿ ಶುದ್ಧೀಕರಣ ಘಟಕವನ್ನು ಹೊಂದಿದೆ.

ವಾಜಪೇಯಿ ಪ್ರಧಾನಿಯಾಗಿದ್ದಾಗ ಬಿಪಿಸಿಎಲ್ ಮತ್ತು  1976ರಲ್ಲಿ ಸ್ಥಾಪನೆಯಾದ ಕೇಂದ್ರದ ಶೇ.51.1 ರಷ್ಟು ಬಂಡವಾಳವಿರುವ ಎಚ್ ಪಿಸಿಎಲ್ ನ ಖಾಸಗಿಕರಣಗೊಳಿಸಲು ಮುಂದಾಗಿದ್ದರು. ಸಂಸತ್ತಿನ ಅನುಮತಿಯಿಲ್ಲದೆ ಹೀಗೆ ಮಾಡಲಾಗಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ಈ ಹಣಕಾಸು ವರ್ಷದಲ್ಲಿ 1.05 ಲಕ್ಷ ಕೋಟಿಗಳ ಬಂಡವಾಳ ಹಿಂತೆಗೆತದ ಕನಸು ಕಟ್ಟಿಕೊಂಡಿರುವ ಕೇಂದ್ರ ಸರ್ಕಾರ, ಇದರಲ್ಲಿ ಮೂರನೇ ದೊಡ್ಡ ಮೊತ್ತದ ಬಿಪಿಸಿಎಲ್ ನ ಮಾರಲು ಅಥವಾ ಖಾಸಗೀಕರಣಗೊಳಿಸಲು ಮುಂದಾಗಿದೆ. ಇದಕ್ಕೆ ಸಂಸತ್ತಿನ ಲ್ಲಿ ಅನುಮತಿಬೇಕು ಎಂಬ ತೊಡಕನ್ನ ಹೋಗಿಸುವುದಕ್ಕಾಗಿಯೇ 2016 ರಲ್ಲಿ ನಿರಸಿತ ಮತ್ತು ತಿದ್ದುಪಡಿ ಕಾನೂನುಗಳನ್ನ ತಂದು, ಸಂಸತ್ತಿನ ಗೊಡವೆಯೇ ಇಲ್ಲದೆ ಇದನ್ನ ಮಾರಲು ಅವಕಾಶ ಪಡೆದು ಕೊಂಡಿದೆ.  

ಪರಿಣಾಮ ಈಗ ರಾಷ್ಟ್ರದ ಪೆಟ್ರೋಲ್ ಮತ್ತು ಎಲ್ ಪಿಜಿ ದರದಲ್ಲಿ ಹೆಚ್ಚಳವಾಗುವುದಕ್ಕೆ ನಾಂದಿಯಾಡಬಹುದು ಎಂಬುದನ್ನೂ ಲೆಕ್ಕಿಸದೆ ಬಿಪಿಸಿಎಲ್ ಮಾರಾಟಕ್ಕೆ ಮುಂದಾಗಿದೆ. ಇದನ್ನ ಕೊಳ್ಳಲು ರಿಲಯನ್ಸ್, ಕುವೈತ್ ಪೆಟ್ರೋಲಿಯಂ, ಎಸ್ ಆರ್ ಸೇರಿದಂತೆ ಬೇರೆಬೇರೆ ರಾಷ್ಟ್ರಗಳ ತೈಲ ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಹೀಗಾಗಿ ಈ ಸಂಸ್ಥೆ ಈಗ ಸ್ವದೇಶದ ಖಾಸಗಿಯವರ ಪಾಲಾಗುತ್ತದೋ, ವಿದೇಶೀ ಸಂಸ್ಥೆಯ ಪಾಲಾಗುತ್ತದೋ ಎಂಬುದು ಕುತೂಹಲ ಕೆರಳಿಸಿದೆ. ಸ್ವದೇಶದವರ ಕೈಗೆ ಹೋದರೆ ಮೋದಿ ಬಯಸುವ ಕಾರ್ಪೊರೇಟ್ ಹಿತಾಸಕ್ತಿ ರಕ್ಷಣೆಯಾಗುತ್ತೆ. ವಿದೇಶೀ ಸಂಸ್ಥೆ ಪಾಲಾದರೆ, ದೇಶ ದೇಶ ಎಂದು ಅಬ್ಬರಿಸುವುದು ಬರೀ ಬೊಬ್ಬೆಯ ಮಾತುಗಳು ಎಂಬುದು ಸಾಬೀತಾಗುತ್ತೆ. ಇದಕ್ಕಿಂತಲೂ ಮುಖ್ಯವಾಗಿ ತೈಲ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಳವಾಗುವ ಭೀತಿಯೂ ಇದ್ದೇ ಇದೆ.