ಪಶ್ಚಿಮ ಬಂಗಾಳದಲ್ಲಿ ಕಚ್ಛಾ ಬಾಂಬ್ ಸ್ಫೋಟ: ಓರ್ವ ಮೃತ

ಪಶ್ಚಿಮ ಬಂಗಾಳದಲ್ಲಿ ಕಚ್ಛಾ ಬಾಂಬ್ ಸ್ಫೋಟ: ಓರ್ವ ಮೃತ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು ನಡೆದ ಕಚ್ಚ ಬಾಂಬ್‍ ಸ್ಫೋಟಕ್ಕೆ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಂಕಿನಾರಾದ ಬುರುಯ್ ಪಾರದಲ್ಲಿ ದುಷ್ಕರ್ಮಿಗಳು ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಚ್ಚ ಬಾಂಬ್‍ ಎಸೆದು ಪರಾರಿಯಾಗಿದ್ದಾರೆ. ಬಳಿಕ ಸ್ಫೋಟಗೊಂಡ ಬಾಂಬ್ ದಾಳಿಯಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇನ್ನು ಮೃತ ವ್ಯಕ್ತಿಯನ್ನು 68 ವರ್ಷದ ಮಹಮದ್ ಮುಖ್ತಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಾಗೊಂಡಿದ್ದು, ಗಾಯಾಳುಗಳಲ್ಲಿ ಮುಖ್ತಾರ್ ಪತ್ನಿ ಕೂಡ ಸೇರಿದ್ದಾರೆ ಎನ್ನಲಾಗಿದೆ. 

West Bengal: Two people killed, four injured in an explosion in ​​Kankinara area (North 24 Parganas) last night. Locals says, "Unidentified miscreants lobbed a crude bomb last night. We are scared. There also have been robberies in the area. Demand administration to help us." pic.twitter.com/VxIdl3gAAs

— ANI (@ANI) June 11, 2019

ಪ್ರಸ್ತುತ ಘಟನಾ ಪ್ರದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಭದ್ರತೆ ನಿಯೋಜಿಸಲಾಗಿದೆ.