ಬಿಜೆಪಿಯ ನಿಜಬಣ್ಣ ಬಯಲಾಗಿದೆ ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬಿಜೆಪಿಯ ನಿಜಬಣ್ಣ ಬಯಲಾಗಿದೆ ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ದಾವಣಗೆರೆ:ದಾವಣಗೆರೆಯ ಹರಿಹರದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ನಾನು ಇಂದಿರಾ ಕ್ಯಾಂಟಿನ್ ನಿಲ್ಲಿಸಲು ಬಿಡಲ್ಲ.ಅನ್ನಭಾಗ್ಯ ಯೋಜನೆ ನಿಲ್ಲಿಸಲು ಬಿಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಾರಿ ಅಧಿವೇಶನದಿಂದ ಮೂರು ದಿನಕ್ಕೆ ಸಾಕಾಗಿ ಹೋಗಿದ್ದಾರೆ.ನಾನು ಇದ್ದಾಗ 15 ದಿನ ಅಧಿವೇಶನ ಮಾಡ್ತಾ ಇದ್ವಿ. ಬಿಜೆಪಿಯವರು ನಾವು ಏನ್ ಮಾತನಾಡಿರೋದು ಕಾಣಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧನೆ ಹೇರಿದ್ದಾರೆ.ಇದರಿಂದ ಬಿಜೆಪಿಯವರ ನಿಜವಾದ ಬಣ್ಣ ಬಯಲಾಗಿದೆ.ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರಿ ರೀತಿ ಆಡಳಿತ ನಡೆಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನೆರೆ ಪರಿಹಾರಕ್ಕೆ ಹಣ ಕೇಳಿದ್ರೆ ಖಜಾನೆ ಖಾಲಿ ಅಂತಾರೆ.ಅದಕ್ಕೆ ನಾನು ಯಡಿಯೂರಪ್ಪನ ಕೇಳಿದ್ರೆ ತಲೆ ಅಲ್ಲಾಡಿಸುತ್ತಾರೆ.ಗೋಲಿ ಆಡೋರ್ನೆಲ್ಲ ಕರ್ಕೊಂಡು ಬಂದು ಅಧಿಕಾರ ಮಾಡ್ತಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.