ಮಮತಾ ಬ್ಯಾನರ್ಜಿಯವರನ್ನು ಪ್ರಚಾರ ಮಾಡದಂತೆ ತಡೆಯಲು ಬಿಜೆಪಿ ಕೋರಿಕೆ

ಮಮತಾ ಬ್ಯಾನರ್ಜಿಯವರನ್ನು ಪ್ರಚಾರ ಮಾಡದಂತೆ ತಡೆಯಲು ಬಿಜೆಪಿ ಕೋರಿಕೆ

ಪಶ್ಚಿಮ ಬಂಗಾಳ: ಕೊಲ್ಕತ್ತಾದಲ್ಲಿ ನಿನ್ನೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಗುದ್ದಾಟದ ಹಿನ್ನೆಲೆ ಮಮತಾ ಬ್ಯಾನರ್ಜಿಯವರನ್ನು ಚುನಾವಣಾ ಪ್ರಚಾರದಿಂದ ನಿರ್ಬಂಧಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಕೋರಿದೆ.

ಮಮತಾ ಬ್ಯಾನರ್ಜಿಯವರು ಅಮಿತ್‌ ಶಾ ಅವರ ರೋಡ್‌ ಶೋ ಸಮಯದಲ್ಲಿ ಗಲಭೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಎಂದು ಬಿಜೆಪಿ ಆರೋಪಿಸಿ ಮನವಿ ಮಾಡಿದೆ.

ಸಂವಿಧಾನಿಕ ಹುದ್ದೆ ಹೊಂದಿರುವ ಮಮತಾ ಬ್ಯಾನರ್ಜಿಯವರು ಅಸಂವಿಧಾನಿಕ ಮಾತುಗಳನ್ನಾಡುತ್ತಾರೆ. ಪಕ್ಷದ ಕಾರ್ಯಕರ್ತರಲ್ಲಿ ದ್ವೇಷ ಸಾಧಿಸಲು ಮತ್ತು ಹಿಂಸಾತ್ಮಕವಾಗಿ ನಡೆದುಕೊಳ್ಳಲು ಹೇಳುತ್ತಾರೆ. ಎಂದು ಬಿಜೆಪಿಯ ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ದೂರಿದ್ದಾರೆ.

ನಿನ್ನೆ ನಡೆದ ಹಿಂಸಾಚಾರದ ಕುರಿತಾಗಿ “ಮಮತಾ ಅವರ ಸರ್ಕಾರದ ಗೂಂಡಾಗಳಿಗೆ ನೆರೆದಿದ್ದ ಜನಸಾಗರ ಮತ್ತು ಅವರ ಪ್ರತಿಕ್ರಿಯೆಯನ್ನು ನೋಡಿ ಭಾರೀ ನಿರಾಸೆಯಾಗಿದೆ. ಅದರಿಂದಾಗಿ ಅವರು ಹೀಗೆ ಮಾಡಿದ್ದಾರೆ” ಎಂದು ಅಮಿತ್‌ ಶಾ ಟಿಎಂಸಿ ಪಕ್ಷವನ್ನು ದೂರಿದರೇ “ನಿನ್ನೆ ನಡೆದ ಗಲಭೆಗೆ ಬಿಜೆಪಿಯೇ ಕಾರಣ. ಅಮಿತ್‌ ಶಾ ಏನು ದೇವರೇ, ಅವರ ವಿರುದ್ದ ಯಾರೂ ಹೋರಾಟ ಮಾಡಬಾರದು ಎಂದು ಕಾನೂನಿದೆಯೇ” ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ನಿನ್ನೆ ನಡೆದ ಘಟನೆಯ ಕುರಿತಾಗಿ ವಿವರಣೆ ನೀಡಿರುವ ಪೊಲೀಸರು “ಗಲಭೆಗೆ ಕಾರಣವಾದ 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಘಟನೆಗೆ ಜವಬ್ದಾರರಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.