ಭಜರಂಗಿ-2 ಚಿತ್ರದ ಪೋಸ್ಟರ್ ಬಿಡುಗಡೆ

ಭಜರಂಗಿ-2 ಚಿತ್ರದ ಪೋಸ್ಟರ್ ಬಿಡುಗಡೆ

ಎ.ಹರ್ಷ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಜರಂಗಿ-2 ಚಿತ್ರವು ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅವರ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲ ಹೆಚ್ಚುತ್ತಿದೆ. ಈ ಮೂಲಕ ನಿರ್ದೇಶಕ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಎರಡನೇಯ ಚಿತ್ರವಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‍ನಲ್ಲಿ ತೆರೆಗೆ ಬಂದಿದ್ದ ಭಜರಂಗಿ ತುಂಬಾ ಸದ್ದು ಮಾಡಿ ಸೂಪರ್ ಹಿಟ್ ಆಗಿತ್ತು.

ಇಂದು ಚಿತ್ರತಂಡವು ಭಜರಂಗಿ-2 ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಶಿವರಾಜ್‍ಕುಮಾರ್ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನೆಮಾದ ಕುರಿತು ಎಲ್ಲಿಯೂ ಬಾಯಿ ಬಿಡದ ಚಿತ್ರತಂಡ ಭಜರಂಗಿಯ ಮುಂದುವರೆದ ಕತೆಯಲ್ಲ, ಕತೆಯ ಎಳೆಯೇ ವಿಭಿನ್ನವಾದುದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಚಿತ್ರಕ್ಕೆ ಜೆ.ಸ್ವಾಮಿ ಅವರ ಛಾಯಾಗ್ರಹಣವಿದೆ. ದೀಪು ಎಸ್.ಕುಮಾರ್ ಅವರ ಸಂಕಲನವಿದ್ದು, ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ.