ಬಿಡುಗಡೆಗೂ ಮುನ್ನವೇ ತ್ರಿವಿಕ್ರಮ’ನ ಅಬ್ಬರದ ಸಂಚಾರ

ಬಿಡುಗಡೆಗೂ ಮುನ್ನವೇ ತ್ರಿವಿಕ್ರಮ’ನ ಅಬ್ಬರದ ಸಂಚಾರ

ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟರ ಪುತ್ರ, ಪುತ್ರಿಯರಿ ತಮ್ಮ ಅದೃಷ್ಟ ಪರೀಕ್ಷೆಗೆ  ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಹಾಗೆಯೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ತ್ರಿವಿಕ್ರಮ. ಇದು ಬಿಡುಗಡೆಗೆ ಮುನ್ನವೇ ಬಾರಿ ಸಂಚಲನವನ್ನು ಹುಟ್ಟುಹಾಕಿದೆ. ಚಿತ್ರದ ಹಾಡುಗಳು ಎ2 ಮ್ಯೂಸಿಕ್ ಸಂಸ್ಥೆಗೆ 50 ಲಕ್ಷ ರೂಪಾಯಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.

ಸ್ಟಾರ್ ಹೀರೋ ನಟಿಸಿರುವ ಸಿನಿಮಾ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗುವುದು ಅಪರೂಪ. ಅಂತದ್ದರಲ್ಲಿ ರವಿಚಂದ್ರನ್ ಪುತ್ರನ ಸಿನಿಮಾ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗೂ ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಈ ಹಾಡುಗಳಿಗೆ ಭರ್ಜರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಸಂಚಿತ್ ಹೆಗಡೆ ಹಾಡುಗಳಿಗೆ ಧ್ವನಿಯಾಗಿದ್ದಾರೆ. ತ್ರಿವಿಕ್ರಮ ಚಿತ್ರದ ಹಾಡುಗಳು ಭಾರೀ ಸದ್ದು ಮಾಡುತ್ತಿದ್ದು ಸಿನಿಮಾಗೆ ಕೂಡಾ ಒಳ್ಳೆ ಪ್ರತಿಕ್ರಿಯೆ ದೊರೆಯುವ ಭರವಸೆ ಇದೆ ಎನ್ನಲಾಗಿದೆ.