ಹಾಲಿಗಿಂತ ಬಿಯರ್ ಕುಡಿಯೋದೇ ಆರೋಗ್ಯಕರ!

ಬಿಯರ್ ನಲ್ಲಿ ಮೂಳೆ ಬೆಳವಣಿಗೆ, ಆಯಸ್ಸು ಹೆಚ್ಚಿಸುವಂಥ ಆರೋಗ್ಯಕರ ಅಂಶಗಳಿರುತ್ತವೆ. ಗೋಧಿ, ಬಾರ್ಲಿ, ಅಕ್ಕಿ, ಜೋಳದಂಥ ಪೇಯಗಳು, ಕರಗುವ ಫೈಬರ್, ಕ್ಯಾಲ್ಸಿಯಂ, ಕಬ್ಬಿಣಾಂಶಗಳೊಡನೆ ಶೇ.90ರಷ್ಟು ನೀರು ಬಿಯರ್ ನಲ್ಲಿ ಇರುವುದರಿಂದ ಇದು ಅತ್ಯಂತ ಹೆಚ್ಚು ಆರೋಗ್ಯಕರ.

ಹಾಲಿಗಿಂತ ಬಿಯರ್ ಕುಡಿಯೋದೇ ಆರೋಗ್ಯಕರ!

ಆರೋಗ್ಯದ ದೃಷ್ಟಿಯಿಂದ ಹಾಲಿಗಿಂತ ಬಿಯರ್ ಕುಡಿಯುವುದೇ ಸರಿ ಎಂದು  ಹಾರ್ವರ್ಡ್ ಆರೋಗ್ಯ ಅಧ್ಯಯನ ವರದಿಯನ್ನಾಧರಿಸಿ ಪ್ರಾಣಿಪ್ರಿಯರ ಸಂಘಟನೆ ಪೆಟಾ(ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಫಾರ್ ಅನಿಮಲ್ಸ್)ಹೇಳಿಕೊಂಡಿದೆ.

ಹಾಲು ಅತ್ಯುತ್ತಮ ಎಂಬ ತಿಳಿವಳಿಕೆ ಇದೆ. ಆರೋಗ್ಯದಾಯಕವೇನೋ ಹೌದು. ಆದರೆ, ಇದರಿಂದ ಬೊಜ್ಜು, ಮಧುಮೇಹ, ಮೊಡವೆ, ಸಿಂಬಳ, ಹೃದ್ರೋಗ ಕಾಯಿಲೆಯನ್ನ ತರುವಂಥ ಲ್ಯಾಕ್ಟೋಸ್ ಕ್ಷಾರಗಳಿವೆ. ಇದಕಿಂತ ಬಿಯರ್ ನಲ್ಲಿ ಮೂಳೆ ಬೆಳವಣಿಗೆ, ಆಯಸ್ಸು ಹೆಚ್ಚಿಸುವಂಥ ಆರೋಗ್ಯಕರ ಅಂಶಗಳಿರುತ್ತವೆ. ಗೋಧಿ, ಬಾರ್ಲಿ, ಅಕ್ಕಿ, ಜೋಳದಂಥ ಪೇಯಗಳು, ಕರಗುವ ಫೈಬರ್ ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶಗಳೊಡನೆ ಶೇ.90ರಷ್ಟು ನೀರು ಬಿಯರ್ ನಲ್ಲಿ ಇರುವುದರಿಂದ ಇದು ಅತ್ಯಂತ ಪೌಷ್ಠಿಕಾಂಶವೂ ಹೌದು, ಉತ್ಕರ್ಷಣ ನಿರೋಧಕ(ಆಂಟಿಆಕ್ಸಿಡೆಂಟ್)ವೂ ಆಗಿದೆ. ಇದರಿಂದಾಗಿ ಹಾಲಿಗಿಂತ ಬಿಯರ್ ಸೇವನೆಯೇ ಹೆಚ್ಚು ಆರೋಗ್ಯಕರ ಎಂದು ವಿವರಿಸಿದೆ.

ಅಂದಹಾಗೆ, ಬಿಯರ್ ಆಗಲಿ, ಹಾಲನ್ನಾಗಲಿ ಒಂದು ಮಿತಿಗಿಂತ ಜಾಸ್ತಿ ಸೇವನೆ ಬೇಡ. ಹೆಚ್ಚು ಆರೋಗ್ಯಕರವಾಗಿದ್ದರೆ ಹಾಲಿಗಿಂತ ಬಿಯರ್‍ ಶ್ರೇಷ್ಠ ಎಂದು ಪ್ರಾಣಿಪ್ರಿಯರ ಸಂಘಟನೆಯೇ ಹೇಳಿಕೊಂಡಿರುವುದರಿಂದ ಬಿಯರ್ ಕುಡಿಯುವವರ ಸಂಖ್ಯೆ ಇನ್ನಷ್ಟೂ ಏರಿಕೆಯಾಗಿಬಿಡುತ್ತಾ ಎಂಬುದನ್ನ ಕಾಯ್ದುನೋಡಬೇಕಿದೆ.