ಕೊರೋನಾ ವೈರಸ್ ಬಗ್ಗೆ ದಿನಗೂಲಿ ಕೆಲಸ ಮಾಡುವವರಲ್ಲೂ ಜಾಗೃತಿ ಮೂಡಿಸಿ : ನಟಿ ಹರಿಪ್ರಿಯಾ ಸಾಮಾಜಿಕ ಕಳಕಳಿ

ಕೊರೋನಾ ವೈರಸ್ ಬಗ್ಗೆ ದಿನಗೂಲಿ ಕೆಲಸ ಮಾಡುವವರಲ್ಲೂ ಜಾಗೃತಿ ಮೂಡಿಸಿ : ನಟಿ ಹರಿಪ್ರಿಯಾ ಸಾಮಾಜಿಕ ಕಳಕಳಿ

ಬೆಂಗಳೂರು : ದೇಶವ್ಯಾಪಿ ಭೀತಿ ಹುಟ್ಟಿಸಿರುವ ಕೊರೋನಾದಿಂದಾಗಿ ಇಡೀ ದೇಶವೇ ಸ್ತಬ್ದವಾಗಿದೆ ಈ ಹಿನ್ನಲೆ ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೂ ಎಲ್ಲಾ ಚಿತ್ರರಂಗವೂ ಸಹ ಸ್ಪಬ್ದವಾಗಿದೆ ಮತ್ತು ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತ ಕ್ರಮ ವಹಿಸಿವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ ಈ ನಿಟ್ಟಿನಲ್ಲಿ ನಟಿ ಹರಿಪ್ರಿಯಾ ಸಹ ತಮ್ಮ ಮನೆಯಲ್ಲೇ ಕುಳಿತು ಸಾಮಾಜಿಕ ಕಳಕಳಿಗೆ ಮುಂದಾಗಿದ್ದಾರೆ.

 

Hi ppl I have a request #Education #SpreadtheWord#SocialDistancing #SelfQuarantine #SpreadLove #StopCorona pic.twitter.com/kFFxbe4Ep8

— HariPrriya (@HariPrriya6) March 20, 2020

ಅದೇನೆಂದರೆ ಕೊರೋನಾ ಬಗ್ಗೆ ತಿಳಿದವರು ಅದರ ಬಗ್ಗೆ ಪೂರ್ಣ ಮಾಹಿತಿ ತಿಳಿ್ದು ಅದರ ಬಗ್ಗೆ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುತ್ತಿ್ದ್ದಾರೆ ಆದರೆ ತೊಂದರೆಯಾಗುತ್ತಿರುವುದು ಬಡವರ್ಗದವರಿಗೆ, ದಿನಗೂಲಿ ಕೆಲಸ ಮಾಡುವವರು, ಕೊಳಗೇರಿ ಪ್ರದೇಶದಲ್ಲಿರುವವರು ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ದಿನಗೂಲಿ ಕೆಲಸ ಮಾಡುವವರ ಬಳಿ ಟಿವಿ ಪೇಪರ್ ಲಭ್ಯವಿರುವುದಿಲ್ಲ ಅವರ ಬಳಿ ಮಾಹಿತಿಯ ಕೊರತೆ ಇರುತ್ತದೆ ಹಾಗಾಗಿ ನಿಮ್ಮ ಸುತ್ತಮುತ್ತ ಿರುವ ಇಂತಹ ಕುಟುಂಬಗಳಿಗೆ ಕೈಲಾದಷ್ಟು ದಿನಸಿ ಸಾಮಾನು,ಸ್ಯಾನಿಟೈಸರ್ ನೀಡಿ ಕೊರೋನಾ ಬಗ್ಗೆ ಅವರಲ್ಲೂ ಜಾಗೃತಿ ಮೂಡಿಸಿ. ನಾನೂ ನನ್ನ ಕೈಲಾದಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇಎ ಎಂದು ಹರಿಪ್ರಿಯಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.