ಎರಡನೇ ಏಕದಿನ ಪಂದ್ಯ; ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿದ ಭಾರತ

ಎರಡನೇ ಏಕದಿನ ಪಂದ್ಯ;  ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿದ ಭಾರತ

ರಾಜ್‌ಕೋಟ್‌ ನಲ್ಲಿ ನಡೆಯುತ್ತಿರುವ  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತವು 340ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿದೆ.

ಆರಂಭದಿಂದಲೇ ರಕ್ಷಣಾತ್ಮಾಕ ಆಟವನ್ನು ಆಡಿದ ಭಾರತ  50 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 340 ರನ್‌ ಗಳಿಸಿದೆ. ಇನ್ನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮ  42 ರನ್ ಹಾಗೂ ಶಿಖರ್ ಧವನ್‌ 96  ರನ್‌ ಗಳಿಸುವ ಮೂಲಕ ಭದ್ರ ಬುನಾದಿ ಹಾಕಿದರು. ಇನ್ನೂ ನಾಯಕ ವಿರಾಟ್ ಕೊಹ್ಲಿ 78, ಶ್ರೇಯಸ್ ಅಯ್ಯರ್ 7, ಕನ್ನಡಿಗ ಕೆ ಎಲ್, ರಾಹುಲ್, 80 ರನ್ , ಮನಿಶ್ ಪಾಂಡೆ 2, ರವೀಂದ್ರ ಜಡೇಜಾ 20,  ಮಹಮ್ಮದ್ ಶಮಿ 1 ರನ್‌ ಗಳಿಸಿದರು. ಆಸ್ಟ್ರೇಲಿಯಾ  ಪರ ಆಡಮ್ ಜಂಪಾ 3 ವಿಕೆಟ್ ಪಡೆದು ಮಿಂಚಿದರೆ ಕೆನ್ ರಿಚರ್ಡ್ಸನ್ 2 ವಿಕೆಟ್‌ ಪಡೆದರು.

ಪ್ರಸ್ತುತ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿದ್ದು, 2ವಿಕೆಟ್‌ ಕಳೆದುಕೊಂಡು 16 ಒವರ್‌  ಮುಕ್ತಾಯಕ್ಕೆ 86 ರನ್‌ ಗಳಿಸಿದೆ.