ಸೈಕಲಾಜಿಕಲ್ ಥ್ರಿಲ್ಲರ್ ಟ್ರೇಲರ್ ಕಂಡು ಥ್ರಿಲ್ ಆದ ಪ್ರೇಕ್ಷಕರು!

ಸೈಕಲಾಜಿಕಲ್ ಥ್ರಿಲ್ಲರ್ ಟ್ರೇಲರ್ ಕಂಡು ಥ್ರಿಲ್ ಆದ ಪ್ರೇಕ್ಷಕರು!

ಚಿರಪರಿಚಿತವಾದ ಟೈಟಲ್ ಮೂಲಕವೇ ಆರಂಭಿಕವಾಗಿ ಎಲ್ಲರನ್ನು ಆಕರ್ಷಿಸಿದ್ದ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ರಾಮ್ ಜೆ ಚಂದ್ರ ನಿರ್ದೇಶನ ಮಾಡಿರೋ ಈ ಚೊಚ್ಚಲ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಇದುವರೆಗೂ ಕ್ರಿಯೇಟಿವ್ ಪೋಸ್ಟರ್ ಗಳ ಕಾರಣದಿಂದಲೇ ಎಲ್ಲರ ಗಮನ ಸೆಳೆದುಕೊಂಡಿದ್ದ ಆಟಕ್ಕುಂಟು ಲೆಕ್ಕಕ್ಕಿಲ್ಲ ಸಿನಿಮಾದ ಟ್ರೇಲರ್ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡುತ್ತಿರೋ ಈ ಟ್ರೇಲರ್ ಬಗ್ಗೆ ಸದಾಭಿಪ್ರಾಯಗಳೇ ಎಲ್ಲೆಡೆಯಿಂದಲೂ ಕೇಳಿ ಬರುತ್ತಿವೆ.

ವಸುಂಧರಾ ಕೃತಿಕ್ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರ ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನದ್ದಾದರೂ ಆ ಸಿದ್ಧ ಸೂತ್ರಗಳನ್ನು ಮೀರಿಕೊಂಡಿದ್ದೆಂಬ ಮಾತುಗಳನ್ನು ಚಿತ್ರತಂಡ ಆರಂಭದಿಂದಲೇ ಹೇಳಿಕೊಂಡು ಬಂದಿತ್ತು. ಹಾಗೆ ಚೌಕಟ್ಟಿನಾಚೆ ಹೊಸೆಯಲ್ಪಟ್ಟಿರೋ ಈ ಕಥೆಯ ಅಸಲೀ ಮಜಾ ಏನೆಂಬುದರ ಝಲಕ್‍ಗಳು ಈ ಟ್ರೇಲರ್ ಮೂಲಕವೇ ಅನಾವರಣಗೊಂಡಿದ್ದೆ. ಸಂಚಾರಿ ವಿಜಯ್, ಮಯೂರಿ ಮತ್ತು ದುನಿಯಾ ರಶ್ಮಿ ಮುಖ್ಯ ಭೂಮಿಕೆಯಲ್ಲಿರೋ ಈ ಕಥೆ ಸಾಧಾರಣದ್ದಲ್ಲ ಎಂಬ ವಿಚಾರವೂ ಈ ಮೂಲಕವೇ ಸಾಬೀತಾಗಿದೆ. ಈ ಟ್ರೇಲರ್ ಕಂಡು ಥ್ರಿಲ್ ಆಗಿರುವ ಪ್ರೇಕ್ಷಕರೆಲ್ಲ ಬಿಡುಗಡೆಯ ದಿನಕ್ಕಾಗಿ ಎದುರು ನೋಡಲಾರಂಭಿಸಿದ್ದಾರೆ.

ಈ ಚಿತ್ರದಲ್ಲಿ ಗೌತಮ್, ಭರತ್ ಸಾಗರ್, ಬೇಬಿ ಪ್ರಾಜ್ಞಾ . ಅಚ್ಯುತ್ ಕುಮಾರ್ ಮೂತಾದವರ ತಾರಾಗಣವಿದೆ. ಪರಮೇಶ್ ಸಿ ಎಂ ಛಾಯಾಗ್ರಹಣ, ನೊಬಿನ್ ಪೌಲ್ ಸಂಗೀತ ಈ ಚಿತ್ರಕ್ಕಿದೆ. ಒಟ್ಟಾರೆಯಾಗಿ ಇದು ಮಾಮೂಲಿ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರವಲ್ಲ, ಇದರಲ್ಲಿ ವಿಶೇಷವಾದುದೇನೋ ಇದೆ ಎಂಬ ನಂಬಿಕೆಯನ್ನು ಈ ಟ್ರೇಲರ್ ಬಲಗೊಳಿಸಿದೆ. ಈ ಮೂಲಕ ನಿರ್ದೇಶಕ ರಾಮ್ ಜೆ ಚಂದ್ರ ಮೊದಲ ಹೆಜ್ಜೆಯಲ್ಲಿಯೇ ಭರವಸೆ ತುಂಬಿಕೊಳ್ಳುವಂತಾಗಿದೆ.