ವೃದ್ಧ ತಂದೆ-ತಾಯಿ ತೊರೆಯುವ ಮಕ್ಕಳಿಗೆ ಜೈಲು ಶಿಕ್ಷೆ: ಬಿಹಾರ ಸರ್ಕಾರದ ಮಹತ್ವದ ನಿರ್ಧಾರ

ವೃದ್ಧ ತಂದೆ-ತಾಯಿ ತೊರೆಯುವ ಮಕ್ಕಳಿಗೆ ಜೈಲು ಶಿಕ್ಷೆ: ಬಿಹಾರ ಸರ್ಕಾರದ ಮಹತ್ವದ ನಿರ್ಧಾರ

ಪಾಟ್ನಾ: ವಯಸ್ಸಾದ ತಂದೆ ತಾಯಿಯನ್ನು ಆರೈಕೆ ಮಾಡದೆ ತೊರೆಯುವ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಮಂಗಳವಾರ ನಡೆದ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆತ್ತವರನ್ನು ನಿರ್ಲಕ್ಷಿಸುವ, ಅನಾಥರನ್ನಾಗಿಸುವ ಮಗ ಹಾಗೂ ಮಗಳ ವಿರುದ್ಧ ಹೆತ್ತವರು ದೂರು ನೀಡಿದ ಬಳಿಕ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಈ ಪ್ರಸ್ತಾವವನ್ನು ಮುಂದಿಟ್ಟಿತ್ತು. ಬಿಹಾರ ಸರ್ಕಾರ ಅನುಮೋದನೆ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರವು ಹೆತ್ತವರನ್ನು ನಿರ್ಲಕ್ಷಿಸುವ ಅಥವಾ ಕೈಬಿಡುವ ಮಕ್ಕಳ ವಿರುದ್ಧ ಪರಿಣಾಮ ಬೀರಲಿದೆ.

ಯಾವುದೇ ವೃದ್ಧ ದಂಪತಿಯು ಈ ಕಾನೂನಿನ ಅಡಿಯಲ್ಲಿ ತಮ್ಮ ಮಕ್ಕಳ ವಿರುದ್ಧ ದೂರು ನೀಡಬಹುದು. ತಂದೆ ತಾಯಿಗಳನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳದ ಮಕ್ಕಳಿಗೆ (ಮಗ/ಮಗಳು) ಗರಿಷ್ಠ ಜೈಲು ಶಿಕ್ಷೆ ವಿಧಿಸಲು ಸಾಮಾಜ ಕಲ್ಯಾಣ ಇಲಾಖೆಯು ತನ್ನ ಪ್ರಸ್ತಾವದಲ್ಲಿ ಉಲ್ಲೇಖಿಸಿದೆ.