ವಿಷ್ಣು ಹೆಸರಿನ ಮತ್ತೊಂದು ಸಿನಿಮಾ 'ವಿಷ್ಣು ಸರ್ಕಲ್' ಬಿಡುಗಡೆಗೆ ಸಿದ್ದ

ವಿಷ್ಣು ಹೆಸರಿನ  ಮತ್ತೊಂದು ಸಿನಿಮಾ 'ವಿಷ್ಣು ಸರ್ಕಲ್' ಬಿಡುಗಡೆಗೆ  ಸಿದ್ದ

ಸ್ಯಾಂಡಲ್ ವುಡ್ ನಲ್ಲಿ ವಿಷ್ಣು ಹೆಸರನ್ನು ಬಳಸಿಕೊಂಡು ಬಂದಿರುವ ಅನೇಕ ಸಿನಿಮಾಗಳು ಈಗಾಗಲೇ ಬಹಳಷ್ಟು ಯಶಸ್ವಿಯನ್ನು ತಂದು ಕೊಟ್ಟಿದೆ. ಅದರ ಸಾಲಿಗೆ ಈಗ ‘ವಿಷ್ಣು ಸರ್ಕಲ್’ ಎಂಬ ಹೊಚ್ಚ ಹೊಸ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ.

ಗುರುರಾಜ್ ಜಗ್ಗೇಶ್ ಅಭಿನಯದ ಹೊಸ ಸಿನಿಮಾ  ‘ವಿಷ್ಣು ಸರ್ಕಲ್’  ಸಿನಿಮಾದ ಧ್ವನಿ ಸಾಂದ್ರಿಕೆಯನ್ನು ನವರಸ ನಾಯಕ ಜಗ್ಗೇಶ್ ರವರು ಅನಾವರಣಗೊಳಿಸಿದರು. 

ನಂತರ ಜಗ್ಗೇಶ್ ರವರು ಮಾತನಾಡುತ್ತಾ  ವಿಷ್ಣು ಸರ್ ಅವರನ್ನು ಮೊದಲು ನೋಡಿದ್ದು ವಿಜಯ್ ವಿಕ್ರಂ ಶೂಟಿಂಗ್ ನಲ್ಲಿ. ಮುಂದೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಂಡು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು.ಮತ್ತು  ಸುದೀಪ್, ಯಶ್ ತಮ್ಮ ಚಿತ್ರಗಳಲ್ಲಿ ಅವರನ್ನು ಜೀವಂತವಾಗಿರಿಸಿದ್ದಾರೆ. ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಗುರುರಾಜ್ ತಾಂತ್ರಿಕತೆಯಲ್ಲಿ ತುಂಬಾ ಚುರುಕಿದ್ದಾನೆ ಎಂದು ತಮ್ಮ ಪತಿಯೊಂದಿಗಿನ ಘಟನೆಗಳನ್ನು ಹೇಳಿಕೊಳ್ಳುತ್ತಾ ಪರಿಮಳ ಜಗ್ಗೇಶ್ ರವರು ಎಲ್ಲರನ್ನು ನಗಿಸಿದರು.

ಚಿತ್ರದಲ್ಲಿ ನಾಯಕನಾಗಿ ಗುರುರಾಜ್ ಸಾಲ ಮರುಪಾವತಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಷ್ಣು ಅವರ ಅಭಿಮಾನವನ್ನು ಹೆಚ್ಚಾಗಿ ತೋರಿಸಲಾಗಿದ್ದು ಸಿನಿಮಾದ ನಾಯಕಿಯರಿಗೆ ಆಕೃತಿ, ಪ್ರಕೃತಿ, ಸಂಸ್ಕೃತಿ ಎಂದು ನಾಮಕರಣ ಮಾಡಿದ್ದಾರೆ ಮತ್ತು ಸಿನಿಮಾಗೆ ವಿಷ್ಟು ಸರ್ ಅವರ ಶೀರ್ಷಿಕೆಯನ್ನು ಯಾವ ಕಾರಣಕ್ಕಾಗಿ ಇಡಲಾಗಿದೆ ಎಂಬ ಪ್ರಶ್ನೆಗೆ ನಿರ್ದೇಶಕ ಲಕ್ಷ್ನೀದಿನೇಶ್ ರವರು ಅದನ್ನು ಸಿನಿಮಾದಲ್ಲಿ ನೋಡಬೇಕು ಎಂದು ಕೂತುಹಲ ಕಾಯ್ದಿರಿಸಿದ್ದಾರೆ.

ಸಿನಿಮಾಗೆ ಸಂಗೀತ ನಿರ್ದೇಶನ ಶ್ರೀವತ್ಸ ಮತ್ತು ಪ್ರದೀಪ್ ವರ್ಮಾ ನೀಡಿದ್ದು ಸಿನಿಮಾದಲ್ಲಿ ನಾಯಕಿಯರಾಗಿರುವ ಸಂಹಿತಾವಿನ್ಯಾ, ಡಾ.ಜಾಹ್ನಿಜ್ಯೋತಿ, ದಿವ್ಯಾಗೌಡ ರವರು ಇದ್ದು ಆರ್ ಭಾಸ್ಕರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.