ಕಾಂಗ್ರೆಸ್ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿಂತೆಗೆದುಕೊಂಡ ಅನಿಲ್ ಅಂಬಾನಿ

ಕಾಂಗ್ರೆಸ್ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿಂತೆಗೆದುಕೊಂಡ ಅನಿಲ್ ಅಂಬಾನಿ

ದೆಹಲಿ: ರಫೇಲ್‍ ಒಪ್ಪಂದದ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ನ್ಯಾಷನಲ್ ಹೆರಾಲ್ಡ್ ವಿರುದ್ಧ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ಈಗ ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ಹಿಂತೆಗೆದುಕೊಳ್ಳುಲು ನಿರ್ಧರಿಸಿದ್ದಾರೆ.

ಈ ಹಿಂದೆ ರಫೇಲ್ ಒಪ್ಪಂದದ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ರಫೇಲ್‍ ಒಪ್ಪಂದ ಸಂಬಂಧದ ಬಗ್ಗೆ ವಿಸ್ತೃತ ಲೇಖನ ಪ್ರಕಟಿಸಿತ್ತು, ಅದಕ್ಕಾಗಿ ಕಾಂಗ್ರೆಸ್‍ ಮುಖಂಡ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧ ಅನಿಲ್ ಅಂಬಾನಿ 5000 ಕೋಟಿ ರೂ ಮೌಲ್ಯದ ಮಾನಹಾನಿ ಮೊಕದ್ದಮೆಯನ್ನು ಹಾಕಿದ್ದರು.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅನಿಲ್ ಅಂಬಾನಿ ಪರ ವಕೀಲ ರಾಸೇಶ್ ಪಾರಿಖ್ ಪಿಟಿಐಗೆ ಪ್ರತಿಕ್ರಿಯಿಸಿ, ‘ನಾವು ಕಾಂಗ್ರೆಸ್ ನಾಯಕರು ಹಾಗೂ ನ್ಯಾಷನಲ್ ಹೆರಾಲ್ಡ್ ವಿರುದ್ದದ ಮಾನಹಾನಿ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುಲು ನಿರ್ಧರಿಸಿದ್ದೇವೆ' ಎಂದು ತಿಳಿಸದ್ದಾರೆ.