ಸಿಎಎ ವಿರೋಧಿಸಿ ಪ್ರತಿಭಟನೆಗಳಲ್ಲಿ ಪ್ರತಿಪಕ್ಷಗಳ ಏಕತೆ ಮುಖ್ಯ: ಅಮರ್ತ್ಯ ಸೇನ್

ಸಿಎಎ ವಿರೋಧಿಸಿ ಪ್ರತಿಭಟನೆಗಳಲ್ಲಿ ಪ್ರತಿಪಕ್ಷಗಳ ಏಕತೆ ಮುಖ್ಯ: ಅಮರ್ತ್ಯ ಸೇನ್

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ನಡೆಸಲು ಪ್ರತಿಪಕ್ಷಗಳ ಐಕ್ಯತೆ ಮುಖ್ಯವಾಗಿರುತ್ತದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಒತ್ತಿ ಹೇಳಿದ್ದಾರೆ.

ದೇಶಾದ್ಯಂತದ ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ಪ್ರತಿಭಟನೆ ಸಂಬಂಧ ಪತ್ರಕರ್ತರೊಂದಿಗೆ ಮಾತನಾಡಿದ ಅಮರ್ತ್ಯ ಸೇನ್ ಅವರು, ಯಾವುದೇ ರೀತಿಯ ಪ್ರತಿಭಟನೆಗೆ ವಿರೋಧದ ಏಕತೆ ಮುಖ್ಯವಾಗಿದೆ. ಇದರಿಂದ ಪ್ರತಿಭಟನೆಗಳು ಸುಲಭವಾಗುತ್ತವೆ. ಪ್ರತಿಭಟನೆ ಸರಿಯಾದ ಕಾರಣಕ್ಕಾಗಿ ಇದ್ದರೆ ಏಕತೆ ಮುಖ್ಯ ಎಂದಿದ್ದಾರೆ.

ನಾನು ಯಾವುದರ ವಿರುದ್ಧ ಪ್ರತಿಭಟಿಸುತ್ತಿದ್ದೇನೆ ಎಂಬುದರ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕು. ಸಂವಿಧಾನ ಅಥವಾ ಮಾನವ ಹಕ್ಕುಗಳಲ್ಲಿ ದೊಡ್ಡ ತಪ್ಪು ಕಂಡುಬಂದಾಗ, ಪ್ರತಿಭಟಿಸಲು ಖಂಡಿತವಾಗಿಯೂ ಕಾರಣಗಳಿವೆ ಎಂದು ಸೇನ್ ಹೇಳಿದರು.