ಸಮ್ಮಿಶ್ರ ಸರ್ಕಾರ ಉಳಿತೈತೋ ತುಂಗಭದ್ರಾ ನದಿಯೋಳ್ಗ ಕೊಚ್ಚಿಗೆಂಡ್ ಹೊಕೈತೋ

ಸಮ್ಮಿಶ್ರ ಸರ್ಕಾರ ಉಳಿತೈತೋ ತುಂಗಭದ್ರಾ ನದಿಯೋಳ್ಗ ಕೊಚ್ಚಿಗೆಂಡ್ ಹೊಕೈತೋ

ಏ, ಬಸ್ಯಾ, ನಿಲ್ಲೋ. ಇಷ್ಟ  ಅವಸರ್ದಾಗ್ ಎಲ್ಲಿಗೆ ಹೊಂಟಿ!, ಬ್ಯಾಗ್ ಹಿಡ್ಕೊಂಡು, ಎಲ್ಲಿಗೆ ಹೊಂಟಿ ಅನ್ನೋದನ್ನ ಹೇಳಿ ಹೋಗೋ. ಕಾಕಾರ ಬೆಳಿಗ್ಗೆ... ಬೆಳಿಗ್ಗೆ ಎಲ್ಗೆ ಹೊಂಟೀ ಅಂದ್ರ ಏನ್ ಹೇಳ್ಲಿ ನಿಮ್ಗ!. ಬೆಂಗಳೂರಿಗೆ ಹೊಂಟಿದ್ದೆ, ಇಂಟರ್ ಸಿಟಿ ಬರೋ ಹೊತ್ತಾಗೇತಿ, ತಡಿಬ್ಯಾಡ್ರಿ ನನ್ನ

.ಲೇ.... ಲೇ''' ನಿ... ಇನ್ನು ಎಷ್ಟ ಹಿಂದ್ ಅದೀಯೋ?. "ಈಗ ಮೊಬೈಲ್ನಾಗ್ ಟ್ರೇನ್ ಎಲ್ಲೈತಿ?, ಯಾವ್ ಸ್ಟೇಶನ್ದಾಗ ನಿಂತಗಂಡೈತಿ ?. ಎಷ್ಟ್ ಗಂಟೆ ತಡಾ ಆಗಿ ಹೊಂಟೈತಿ?, ನಿ ಇರೋ ಸ್ಟೇಶನ್ಗೆ ಎಷ್ಟತ್ತಿಗೆ ಬರತೈತಿ ಅನ್ನೋದನ್ನ ಕರೆಕ್ಟಾಗಿ ತೋರಸತೈತಿ". ನೀ ಎಂತಾವಾಲೇ?. ಇಲ್ನೋಡು, "ಮಾಯ್‍ಟ್ರೇನ್ ಯಾಪ್ನೊಳಗ್ ಟ್ರೇನ್ ಎಲ್ಲೈತಿ ಆನ್ನೋದ ಗೊತ್ತಾಕೈತಿ". ಇವತ್ತ ಇಂಟರ್ ಸಿಟಿ ರೈಲು ಒಂದುವರಿ ತಾಸ್ ತಡಾ ಆಗಿ ಹೊಂಟೈತಿ, ಇನ್ನು ಹುಬ್ಳಿನ್ ಬಿಟ್ಟಿಲ್ಲಾ!. ಇಷ್ಟು ಲಗೂನ್ ಹೋಗಿ ರೈಲ್ವೇ ಸ್ಟೇಶನ್ ಒಳ್ಗ ನೋಣಾ ಹೊಡಿತಿ ಏನ್!. ಬಾ ಇಲ್ಲೆ ವಿನಯಕ್ ಹೋಟಲ್ನಾಗ ಚಾ ಕುಡ್ದ ಕಷ್ಟ-ಸುಖಾನ್ ಮಾತಾಡೋಣ ಬಾ ಎನ್ನುತ್ತ ಇಬ್ಬರು ಹೋಟೆಲ್ ಕಡೆಗೆ ಹೋದರು.

ಏನ್ಪಾ ಬಸ್ಯಾ, ಎಲ್ಲಿಗೆ ಬಂತೋ ನಮ್ಮ ರಾಜ್ಯದ ರಾಜಕಾರ್ಣ?. ಏನಂತಾರಾ ನಿಮ್ಮ "ಯಡೆಯೂರಣ್ಣ, ಸಿದ್ದಣ್ಣ, ಕುಮಾರಣ್ಣ, ರೇವಣ್ಣ, ಗುಂಡುರಾವು, ಬೊಮ್ಮಾಯಣ್ಣ, ಹೊನ್ನಾಳಿ ಹೋರಿಕರಾ."?

ಅವ್ರೇನ್ ಅಂತಾರ್ರೀ, "ನಿನ್ನೆ ವಿಧಾನಸೌಧದೊಳ್ಗ ಹೊಡ್ದಾಟ್ ನೋಡೀರಿಲ್ಲ. ನಮ್ಮ ರಾಜ್ಯದ ಮರ್ಯಾದಿ ಈರಾಜಕಾರ್ಣಿಗಳು ಮೂರುಕಾಸಿಗೆ ಹರಾಜ್ ಹಾಕ್ಯಾರ"!. "ಇವ್ರ ಮಂಗಾಟ ನೋಡಿ ಜನ್ರು ಎಂತೆಂಥಾ ಪುಣ್ಯಾತ್ಮರು ವಿಧಾನಸೌಧದೊಳ್ಗ ಅದರಲ್ಲ ಅಂತ ಹಣಿ ಹಣಿ ಜಜ್ಜಿಕೊಂಡ್ರು".
ಅಂತಾದ್ದೇನಾತೋ..?.

"ಏನಾತು ಅಂತ್ ಕಳ್ತೀರಲ್ರೀ, ಹೊನ್ನಾಳಿ ಹೋರಿಕರದ್ದ ಆರ್ಭಟಾ ನೋಡೀರಿಲ"!್ಲ, "ಕಾಲಕೆದ್ರಿ ಗುಟರ್ ಹಾಕಿ ಜಗ್ಳಾ ತಗ್ದು ಕಂಡ ಕಂಡರ್‍ನ್ನ ಗುದ್ದಾಕ ಹೋಗಿತು"್ತ. "ಇನ್ನ ಸಜ್ಜನ ರಾಜಕಾರ್ಣಿ ಅಂತ್ ಹೆಸ್ರಾಗಿದ್ದ ಬೊಮ್ಮಾಯಿ ಕಾಲಿಂದ ವಿಧಾನಸೌಧದ ಬಾಗಲ್ನಾನ ಒದ್ಯಾಕ ಹತ್ತಿತ್ತು...."!
ಹೌದೋ ನಾನು ಟಿವಿಯೋಳ್ಗ ನೋಡ್ದೆ, "ಅಬ್ಬಬ್ಬಾ ಅದೇನ್ ಹೊಡ್ದಾಟಾ, ಅದೇನು ಗುದ್ದಾಟಾ", ಇವನವ್ನ್ "ಟಿವ್ಯಾಗ್ ತೋರ್ಸತಾರಲ್ಲೋ ಈಡಬ್ಲು ಡಬ್ಲು ಹೋಡ್ದಾಟ್ ಹಂಗ್ ಇತ್ತ ನೋಡೂ"?. "ಟಿವ್ಯಾಗ್ ಹೊಡ್ದಾಡೋ ಪೈಲ್ವಾನ್ರು ಕೈಗೆ ಬಾಕ್ಸಿಂಗ್ ಕೈಚಿಲಾ ಹಾಕ್ಕೊಂಡಿರತಾರ, ಆದ್ರ ನಮ್ಮ ರಾಜಕಾರಣ್ಗಿಗಳು ಬಾಕ್ಸಿಂಗ್ ಕೈಚೀಲಾ ಹಾಕ್ಕೋಳ್ದ ಹೊಡದಾಡ್ಯಾರಾ!"....ಹೊಡ್ದಾಡಕ ಅವ್ರ್ಗೇನಾಗಿತ್ತೋ ದಾಡಿ..?.

"ಅವ್ರಿಗೇನೂ ಆಗಿಲ್ರೀ ದಾಡಿ, ಆಗಿರೋದು ನಮ್ಮ ಜನ್ರೀಗೆ ದಾಡಿ!", "ಎಂತೆಂಥಾ ಪುಣ್ಯಾತ್ಮರನ್ನ ಆರ್ಸಿ ಕಳಸ್ಯಾರ  ಅಂತಿರೀ"...?. "ಒಬ್ಬರೂ ಒಂದಂದ್ ಮುತ್ತಿದ್ದಂಗ್"!. "ನಾ ಏನ್ ಕಮ್ಮಿ, ನಾ ಏನ್ ಕಮ್ಮಿ ಇಲ್ಲಾ ಅಂತ್   ಹೊಡ್ದಾಡಿ ದೇಶದ್ ತುಂಬಾ ವಾಯ್ನ್ ಆಗ್ಯಾರ". "ಡಾಕ್ಟರ್ ಸುಧಾಕರ್ ವಿಧಾನಸೌಧದ ಒಳ್ಗ ಸ್ಪೀಕರ್‍ಗೆ ಕಚೇರಿ ಒಳ್ಗ ಎಂಎಲ್‍ಎ ಗಿರಿಗೆ ರಾಜೀನಾಮೆ ಕೊಟ್ಟು ಹೊರ್ಗ ಬರೋಹೊತ್ತಿನ್ಯಾಗ  ಗುಂಡುರಾವು, ಖರ್ಗೆ, ಸುಧಾಕರ್ನ ಕುತ್ಗಿ ಪಟ್ಟಿ ಹಿಡ್ಕೊಂಡು ಎಳ್ಕೊಂಡು ಜಾರ್ಜಸಾಹೇಬ್ರ ಕ್ವಾಣಿಗೆ ದರಾ ದರಾ ಎಳ್ಕೊಂಡ ಹೋದ್ರು. ಇದ್ನ ನೋಡಿದ್ ಬೊಮ್ಮಾಯಿ, ರೇಣಾಕಾಚಾರಿ ಹಿಂಗ್ ಗದ್ಲಾ ಮಾಡ್ಯಾರ್ ನೋಡ್ರಿ". 

ಅಲ್ಲೋ "ರಾಜಕಾರಣ್ಣದಾಗ ಮುದ್ಕರಾಗ್ಯಾರ, ಅಂತವ್ರು ವಿಧಾನಸೌಧದಾಗ್ ಅದಾರ, ಅವ್ರರ ಹೇಳಬೇಕಿತ್ತು, ಹೊಡದಾಡ ಬ್ಯಾಡ್ರೋ, ಜನಾ ನಿಮ್ಮನ್ನ ನೋಡ್ತಾರ ಅಂತ್". ಹೇಳ್ತಾರ ನಿಮ್ಗ, ಅವ್ರಿಂದ್‍ನಾ ಈ ಹೊಡ್ದಾಟ ಆಗಿದ್ದು...?.ಅದೇಂಗ್ ಹೇಳ್ತಿ...! ನಾ....ಮೊದ್ಲ ಹೇಳ್ದೆ ನಿಮ್ಗ, ರಾಜ್ಯದಾಗ್ ಕುರುಕ್ಷೇತ್ರ ನಡದೈತಿ ಅಂತ್. ಹೌದು ಇದ್ರಾಗ್ ಕೌರವರ್ಯಾರು, ಪಾಂಡವರ್ಯಾರು..?, ದೃತರಾಷ್ಟ್ರ ಯಾರೂ?. ಭೀಮಾ ಯಾರೂ?, ಅರ್ಜುನಾ ಯಾರು, ಅಭಿಮನ್ಯು ಯಾರೂ.?

ನೋಡ್ರೀ, ನಮ್ಮ "ಕರ್ನಾಟಕದ ರಾಜಕಾರ್ಣದಾಗ್ ಪಾಂಡವರ್ ಸಂಖ್ಯಾ ಬಳಾ ಕಮ್ಮಿ ಐತಿ"...!. "ಅಧಿಕಾರಕ್ಕಾಗಿ , ಕುರ್ಚೆ ಹಿಡೆದ್ಕಾಗಿ ಎಲ್ಲಾರೂ ಕೌರವರ ಆಗ್ಯಾರ"!.  "ಈಗ ಕೈ ಬಿಟ್ಟರ ಮುಂದ ಕುರ್ಚೆ ನಮ್ಗ ಸಿಗಂಗಿಲ್ಲ ಅಂತ್ ಸಿಕ್ಕಿದ್ದ ಟಾಯಿಮ್ ಅಂತ್ ಈಗ ಮಳೆಗಾಲ್ ಬ್ಯಾರೆ ನೋಡ್ರೀ, ಹೆಂಗೂ ಮಳೆ ಸುರ್ಯಾಕ ಹತ್ತೇತಿ, ಎಷ್ಟಬೇಕೋ ಅಷ್ಟನ್ ಡ್ರಮ್‍ನ್ಯಾಗ ಮಳಿ ನೀರ್ ಹಿಡ್ಕಂಡ್ ಇಟಗೊಳ್ಳಾಕ ಹತ್ಯಾರ್". ಇನ್ನು ಮಹಾಭಾರ್ತದ್ದ ಪಾತ್ರಗಳು ಯಾರ್ಯಾರು ಅನ್ನೋದನ್ನ ನೀವು ಕಲ್ಪನೆ ಮಾಡಿಕೊಳ್ಳ್ರೀ. ಅದ್ನ ನಿಮ್ಗ ಬಿಟ್ಟೇನಿ.

ಎಂತಾ ಮಾತ ಹೇಳ್ದಿ ಬಸಣ್ಣ!, ನಿನ್ನ ಮಾತು ನೂರಕ್ ನೂರು ಕರೆ ಐತಿ.! "ಅಲ್ಲೋ ಎಣ್ಣಿ ಬಂದಾಗ ಯಾರರ್ ಕಣ್ಣ ಮುಚಿಗೆಂಡ್ ಇರ್ತಾರನೂ!" , "ತನ್ಗು ಇರ್ಲಿ, ತಮ್ಮ ಅಪ್ಪಂಗೂ ಇರ್ಲಿ, ಮನಿ ಮಂದಿಗೂ ಇರ್ಲಿ ಅನ್ನೋರ ಸಂಖ್ಯಾನ ಬಾಳಾ". "ನಂದಲ್ಲಾ ನಮ್ಮಪ್ಪಂದಲ್ಲಾ ಬಂದ್ರ ಬರ್ಲಿ ಬೀಡೂ ಅಂತ್ ಸಿಕ್ಕಾಗ ಸಿರೂಂಡೆ ಅಂತ್ ಮಳಿ ನೀರನ್ ಹಿಡ್ಕಳ್ಯಾಕ ಹತ್ಯಾರ ಹಿಡ್ಕಳ್ಳಿ ಬಿಡೂ"..?. 

ಅಲ್ರೀ ಕಾಕಾ ಇವ್ರ ಮಾಡೋದ ಬರೋಬ್ಬರಿ ಅಂತೀರೆನೂ...?. "ಕೈ"ಪಕ್ಷದಿಂದಾ ಆರ್ಸಿಬಂದರೂ, "ಹೊರೆಹೊತ್ತ ಮಹಿಳಾ ಪಕ್ಷದಿಂದ ಆರ್ಸಿಬಂದ್ ಈಗರ್ ಒಂದ್ ವರ್ಷಆಗೇತಿ, ಇನ್ನು ನಾಲ್ಕ ವರ್ಷ ಇವ್ರ ಅಧಿಕಾರ ಐತಿ, ಜನ್ರಿಗೆ ಹೆಂಗ್ಯ್ ಮುಖ ತೋರ್ಸತಾರ್ ಇವ್ರು..? ಮತ್ತ ಚುನಾವಣ್ಯಾಗ ನಿಂತ್ರ ಆರ್ಸಿ ಬರ್ತಾರಂತಿರೇನು ಇವ್ರು"?. 

ಜನ್ರ ನೆನಪಿನ್ ಶಕ್ತಿ ಬಾಳಾ ಕಮ್ಮಿನೋ ತಮ್ಮ ಕಮ್ಮಿ!. "ಒಂದ್ ವಾರಾ ಇವ್ರ ಎಡಬಿಡಂಗಿ ಕೆಲ್ಸದ ಬಗ್ಗೆ ಮಾತಾಡ್ತಾರಾ", ಆಮ್ಯಾಲ್ ಎಲ್ಲಾನೂ ಮರ್ತು "ಮನ್ಯಾಗ ಬಳ್ಳೋಳ್ಳಿ ಇಲ್ಲಾ, ಉಳ್ಳಾಗಡ್ಡಿ ಇಲ್ಲಾ, ಜ್ವಾಳ ಇಲ್ಲಾ, ಅಕ್ಕಿ ಇಲ್ಲಾ, ಅಡುಗಿ ಎಣ್ಣಿ ಇಲ್ಲಾ"... ಅಂತ್ ಸಂಸಾರದ್ ಜಂಜಾಟದೊಳ್ಗ ಬಿದ್ದು ಹೊರಳಾಡ್ತಾರಾ"?. "ಇಂತಾ ಮನಿಮುರ್ಕ ರಾಜಕಾರ್ಣ ಎಷ್ಟ ನೋಡಿಲ್ಲ ನಮ್ಮ ಜನಾ"!. ಅದ್ನೇಲ್ಲಾ ಹೇಳಬ್ಯಾಡ್,  "ನಾಳೆ ಇಲೇಕ್ಷನ್ ಒಳ್ಗ ಜನ್ರು ಹಂಗ್ ಇವ್ರಿಗೆ ಹೋಟ ಹಾಕ್ತಾರ ಅಂತಿಯೆನೂ!, ಇಲ್ಲ. "ಎಲ್ಲಾರು ರೊಕ್ಕಾ ತಗೋಳ್ಳದಿದ್ದ್ರೂ ಕೆಲವ್ರು ಈ ರಾಜಕಾರ್ಣಿಗಳೂ ಕಳ್ಳಗಂಟ್ ಮಾಡಿರೋದ ಗೊತ್ತಿರತೈತಿ.  ಅವ್ರ ಇವ್ರು ಕಳ್ಳಗಂಟ್ ಬಿಚ್ಚಸತಾರ"?.

ಕಾಕಾರ ಈ "ಕಮಲಪಕ್ಷದವ್ರು ಮಾಡಿದ್ದು ಸರಿ ಅಂತಿರೇನೂ"?.

"ಅದೇಂಗ್ ಸರಿ ಅನ್ನಾಕ್ ಆಕೈತಿ!. ತಪ್ಪ ಯಾರ್ ಮಾಡಿದ್ರೂ ತಪ್ಪ್". ಅಲ್ಲೋ "ಕೈಪಕ್ಷದ ಎಮ್ಮೆಲ್ಲೆಗಳೂ, ಹೊರೆಹೊತ್ತ ಮಹಿಳಾ ಪಕ್ಷದ ಎಮ್ಮೆಲ್ಲೆಗಳು ನಿಮ್ಮ ಸವಾಸ ಸಾಕಂತ್ ಎರ್ಡು ಪಕ್ಷಕ್ಕೂ ಕೈಮುಗ್ದ ಎಮ್ಮೆಲ್ಲೆಗಿರಿಗೆ ರಾಜೀನಾಮೆ ಕೊಡ್ತಾರ ಅಂದ್ರ, ಅವ್ರು ಎಷ್ಟ ಬ್ಯಾಸರಾ ಆಗಿರಬೇಕು"?. "ಅವ್ರನ್ ಈ ಎರಡು ಪಕ್ಷದವ್ರು ಹೆಂಗ್ ನಡ್ಸಿಕೊಂಡಿರಬೇಕು"?. "ಸಮ್ಮಿಶ್ರ ಸರ್ಕಾರ ಇದ್ರು ಸತಗಿ ಇವ್ರ ಕೆಲ್ಸಾ ಆಗತಿದ್ದಿಲ್ಲಂತ್", "ಇವ್ರ ಕ್ಷೇತ್ರಕ್ಕ ಸಿಎಂ ರೊಕ್ಕಾ ಕೊಡ್ತಿರಲಿಲ್ಲಂತ್", "ಇವ್ರು ಹೇಳಿದ ಅಧಿಕಾರಿನ ವರ್ಗ ಮಾಡ್ತಿರಲಿಲ್ಲಂತ್, ಎಲ್ಲಾದ್ರಾಗೂ ರೇವಣ್ಣ, ಶಿವಕುಮಾರಣ್ಣ, ಕೈಯಾಡಸತಿದ್ದರಂತ್" ಹಿಂಗಾಗಿ ಈ ಎಮ್ಮೆಲ್ಲೆಗಳೂ,  ಈ ಎಮ್ಮೆಲ್ಲೆಗಿರಿ ಸವಾಸಾನ ಬ್ಯಾಡ್ ಅಂತ ರಾಜೇನಾಮಿ ಕೊಟ್ಟಾರಂತ ಅಂತ್ ನಮ್ಮ ಹಿರೇಕೆರೂರ ಎಮ್‍ಎಲ್‍ಎ ಪಿಎ ಕುಲಕರ್ಣಿ ಕಲ್ಲೇಶಿ ಹೇಳ್ತಿದ್ದ.

ಅಲ್ಲೋ ಕಮಲಪಕ್ಷದವ್ರು ಏನ್ ಮಾಡ್ಯಾರಪಾ? "ಅವ್ರೇನೂ ಸನ್ಯಾಸಿಗಳಂತು ಅಲ್ಲ!". ಈಮಾತನ್ನ ನಿಮ್ಮ ಯಡೆಯೂರ್ಸ್ ಹೇಳಿತಿ, "ನಾವ್ ನೂರಾನಾಲ್ಕ್ ಎಂಎಲ್‍ಎ ಅದೇವಿ, ರಾಜ್ಯದ ಜನ್ರು ನಮ್ಗ ಅಧಿಕಾರನಡ್ಸ್ರೀ ಅಂತ್ ಆಶೀರ್ವಾದ ಮಾಡ್ಯಾರ". "ನಾವು ರಾಜ್ಯ ಆಳೋರ ಅಂತ್ ಹೊಸ ಅಂಗಿ -ಅನ್ ಸೈಜ್ ಚೊಣ್ಣಾ ಹೊಲಿಸಿಕೊಂಡು ಸಿಎಂ ಆಗಿ ಪ್ರಮಾಣ ವಚ್ನಾ ಸ್ವೀಕರಿಸಾಕ ರೆಡಿ ಆಗಿ ಕುಂತ ಬಿಟೈತಿ"

.ಹಂಗಾದ್ರ "ಕುಮಾರಣ್ಣ, ರೇವಣ್ಣ, ಸಿದ್ದಣ್ಣ, ಶಿವಕುಮಾರಣ್ಣನ ಕತಿ ಗೋವಿಂದ ಗೋವಿಂದ್" ಅನ್ನೋದ ಅಂತಿರೇನೂ?.

ಆದ್ರೂ ನಿವೂ ಏನ್ ಅನ್ರೀ "ನಮ್ಮ ಯಡೆಯೂರಣ್ಣನ ರಾಜಕೀಯ ಹೌದ್ ಬಿಡ್ರೀ, ಎದುರಾಳಿಗಳೂ ಮುಟ್ಟಿ ಮುಟ್ಟಿ ನೋಡ್ಕೋಬೇಕು ಹಂಗ್ ಹೊಡ್ತಾ ಕೊಟ್ಟಾರ್", ಇದನ್ನ ಅನ್ನೋದೂ  "ಹೊತ್ತ ನೋಡಿ ಹೊಡ್ತಾ ಹಾಕು ಅಂತ್". ಅಲ್ರೀ,  "ಅತ್ಲಾಗ ಕೈಪಕ್ಷದ ಜೆಡಿಎಸ್ ಎಮ್‍ಎಲ್‍ಎಗಳೂ ತಮ್ಮ ಎಮ್‍ಎಲ್‍ಎ ಗಿರಿಗೆ ರಾಜೀನಾಮೆ ಬೀಸಾಕಿ ಬಾಂಬೈಕ್ ಹೋಗಿ ಸ್ಟಾರ್ ಹೋಟಲ್ನಾಗ ಕುತಗಂಡ್ ಮಜಾಮಾಡಾಕ ಹತ್ತಾರ"!. "ಇತ್ತಾಗ್ ಎಂಎಲ್‍ಎ ಗಳು ಜಿದ್ದಿಗೆ ಬಿದ್ದರಂಗ್ ಒಬ್ಬರಮ್ಯಾಲ ಒಬ್ರು ಶಾಸಕಗಿರಿಗೆ ರಾಜೀನಾಮೆ ಕೊಡಕಾ ಹತ್ತಾರ", "ಎಷ್ಟ ಮಂದಿ ಎಮ್‍ಎಲ್‍ಎಗಳೂ ತಮ್ಮ ಸ್ಥಾನ ಉಳ್ಸಿಕೊಳ್ತಾರೋ, ಮಾರಿಕೊಳ್ತಾರೋ ಒಂದು ಗೊತ್ತಾಗವಲ್ದೂ?. ಕುಮಾರಣ್ಣ, ಸಿದ್ದಣ್ಣ ಬೀದಿಗಿಳ್ದಾರ್, ಅತ್ಲಾಗ್ ನೋಡಿದ್ರ ಶಿವಕುಮಾರಣ್ಣ ಮುಂಬೈ ಹೋಟೆಲ್ ಮುಂದ ಸ್ಟ್ರೆಕ್ ಮಾಡಿ ಬಂದೈತಿ. ಒಟ್ಟಿನ್ಯಾಗ್ ಈಸಮ್ರಿಶ್ರ ಸರ್ಕಾರ ಉಳೆಂಗಿಲ್ಲ ಅಂತಿರೇನೂ"?. 

"ಸಮ್ರಿಶ್ರ ಸರ್ಕಾರ ಉಳಿತೈತೋ ತುಂಗಭದ್ರಾನದಿಯೋಳ್ಗ ಕೊಚ್ಚಿಗೆಂಡ್ ಹೊಕೈತೋ" ಗೊತ್ತಿಲ್ಲ !. ಆದ್ರ "ಯಡೆಯೂರಣ್ಣ ಮಾತ್ರ ಮುಖ್ಯಮಂತ್ರಿ ಆಗೋದು ಪಕ್ಕಾ ನೋಡು"!.

ಅಲ್ರೀ. ಈ "ರಾಜೀನಾಮೆ ಕೊಟ್ಟಿರೋ ಎಮ್‍ಎಲ್‍ಎ  ಅಲ್ಲಾ, ಅಲ್ಲಾ....ಮಾಜಿ ಎಂಎಲ್‍ಎ ಗಳು ಗತೀ ಏನ್ರೀ. ಪಾಪಾ ಅವ್ರು ಇವ್ರು ಸಿಎಂ ಆಗಾಕ ಮೂರು ಬಿಟ್ಟೋರಹಂಗ್ ನಡಕೊಂಡಾರ್, ಜನ್ರನ್ ಕ್ಷಮಾ ಕೇಳ್ಯಾರಾ".

ಪಾಪಾ ಅಂತ್ ಯಾಕ್ ಅಂತಿಯೋ?, ಅವ್ರೇನು ಹಂಗ್ ಎಮ್‍ಎಲ್‍ಎಗಿರಿಗೆ ರಾಜೀನಾಮೆ ಕೊಟ್ಟಾರಂತ್ ತಿಳಕಂಡಿಏನು?. "ಯಾವ್ದ ಕೆಲ್ಸ್ ಇರ್ಲಿ ಅದ್ಕ ತಕ್ಕ ಗೌರವಾ ಇದ್ದ ಇರ್ತತೀ. ಕೆಲ್ಸಕ್ ತಕ್ಕ ಗೌರವಾ ಅದನ್  ಅವ್ರು ಪಡ್ಕೊಂಡಿರತಾರ".

"ಪಡ್ಕೋಂಡಿರತಾರೋ ಹೊಡ್ಕೋಂಡಿರತಾರೋ" ಗೊತ್ತಿಲ್ಲ!. "ಆದ್ರ ಇವ್ರ, ಇವ್ರ ಕಾದಾಟದ್ಗಾಗ ನಮ್ಮ ಜನ್ರ ಪಾಡು ನಾಯಿ ಪಾಡ್ಯಾಗೇತಿ"?. "ನೆಟ್ಟಗ್ ಮಳಿ ಆಗವಲ್ದೂ, ಬೆಳೆಬರವಲ್ದೂ ಇಂತಾದ್ರಾಗ ಪೆಟ್ರೋಲು, ಡೀಸೆಲ್‍ದರ ಹೆಚ್ಚಾಗೇತಿ, ಅಕ್ಕಡಿಕಾಳು, ಅಕ್ಕಿ-ಜ್ವಾಳ, ಕಾಯಿಪಲ್ಲೆ ರೇಟು ಹೆಚ್ಚಾಗೇತಿ, ಜೀವ್ನಾ ಹೆಂಗಪಾ ಅನ್ನೋ ಚಿಂತಿಯೋಳ್ಗ ಜನ ಗೋಳಾಡಾಕ ಹತ್ಯಾರ". ಆದ್ರ, "ಇದ್ರ ಬಗ್ಗೆ ಕಿಂಚಿತ್ತೂ ಚಿಂತಿಲ್ದ ಈಮೂರು ಬಿಟ್ಟೀರೋ ರಾಜಕಾರ್ಣಿಗಳು ಮಾನಾ ಮರ್ಯಾದಿನ ಗಂಟ್ ಕಟ್ಟಿ ನಾಗಂದಿಮ್ಯಾಗ ಇಟ್ಟು  ತಮ್ಮ ತಮ್ಮ ಲಾಭಕ್ಕಾಗಿ ರಾಜ್ಯಮಾನನ ಮೂರುಕಾಸ್ಗೆ ಹರಾಜ ಹಕಾಕ್ ಹತ್ತಾರ". 

"ಅಲ್ಲಲೇ ಹರಾಜ್ ಹಾಕಾಕ ಹತ್ತಾರ ಅಂತಿಎಲ್ಲೋ , ಹರಾಜ್ ಹಾಕೆ ಬಿಟ್ಟಾರ್ ಇನ್ನೇನ್ ಉಳದೈತಿ ಅಂತೀ".“ಅಲ್ಲೋ ಸ್ಪೀಕರ್ ರಮೇಶಕುಮಾರ್ ಶಾಸಕರ್ ರಾಜೀನಾಮೆ ಸದ್ಯಕ್ಕ ತಗೋಳ್ಳದಿಲ್ಲ ಎಂತ್ ಹೇಳ್ಯಾರಂತ್”. ಹೇಳ್ತಾರ್ರೀ, ಅವ್ರು ಸುಪ್ರೀಂ, ಸುಪ್ರೀಂ ಕೋರ್ಟಗೆ ತಮ್ಮ ನಿರ್ಣಯಗಳ್ನ ತಿಳಿಸ್ಯಾರ್.  ಅತು ಬಿಡು ಸದ್ಯಕ್ಕಂತೂ ಈ ಕುರುಕ್ಷೇತ್ರ ಮುಗೆಂಗಿಲ್ಲ. ಅಲ್ಲೋ “ಡಾ.ಕಂಬಾರ ಅವ್ರು ಎಬಿವಿಪಿ ಸೇರ್ಯಾರಂತಲ್ಲೋ ಹೌದ”.

“ಹೌದ್ರೀ ನಮ್ಮ ಡಾ.ಚಂದ್ರಶೇಖರ ಕಂಬಾರ್ರು ಎಬಿವಿಪಿ ಸೇರಬಿಟ್ಟಾರ್. ಅಲ್ಲೋ ಅವ್ರಿಗೆ ಜ್ಞಾನಪೀಠ ಪ್ರಶಸ್ತಿ ಬಂದೈತಿ. ಮತ್ಯಾವ ಪ್ರಶಸ್ತಿ ಅವ್ರಿಗೆ ಬರಬೇಕಾಗೇತಿ”..?

“ದೊಡ್ಡೋರ ಸಹವಾಸ ಯಾಕಬೇಕು ಬಿಡು, ಅವ್ರು ಯಾವ ಸಂಘಟನೆ ಸೇರಬೇಕು, ಸೇರಬಾರ್ದು ಅನ್ನೋದ ಅವ್ರಿಗೆ ಬಿಟ್ಟಿರೋ ವಿಚಾರ “.

ಆತಬಿಡ್ರೀ ಗೌಡ್ರ ನಾನು ಇದ ಸುದ್ದಿನ ಹತ್ತಿರದಿಂದಾ ನೋಡಿದ್ರಾತು ಅಂತ್ ಬೆಂಗಳೂರಿಗೆ ಹೊಂಟಿದ್ದೆ. ಇಂಟರ್ ಸಿಟಿ ಗಾಡಿ ಯಲವ್ಗಿ ಸ್ಟೇಶನ್‍ಕ್ ಬಂದಿರಬೇಕು, ನಾನು ಸ್ಟೇಶನ್‍ಕ ಹೊಕ್ಕನಿ, ನೀವು ಚಾ ಬಿಲ್ಲ ಕೊಟ್ಟ ಹೋಗ್ರಿ, ಎನ್ನುತ್ತ ಬಸಣ್ಣ ಬ್ಯಾಗ್ ಹಿಡ್ದ್ ರೈಲ್ವೆ ನಿಲ್ದಾಣದ ಒಳ್ಗ ನಡ್ದ.