ಪ್ರಿಯಾಂಕಾ ಆಪ್ತ ಅಜಯ್ ಕುಮಾರ್ ಲಲ್ಲು ಉತ್ತರಪ್ರದೇಶ ಕಾಂಗ್ರೆಸ್ ಘಟಕದ ನೂತನ ಸಾರಥಿ

ಪ್ರಿಯಾಂಕಾ ಆಪ್ತ ಅಜಯ್ ಕುಮಾರ್ ಲಲ್ಲು ಉತ್ತರಪ್ರದೇಶ ಕಾಂಗ್ರೆಸ್ ಘಟಕದ ನೂತನ ಸಾರಥಿ

ಉತ್ತರ ಪ್ರದೇಶ ಕಾಂಗ್ರೆಸ್ ಘಟಕಕ್ಕೆ ಅಜಯ್ ಕುಮಾರ್ ಲಲ್ಲು ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ವಲಯದಲ್ಲಿ ಗುರುತಿಸಿಗೊಂಡಿರುವ ಅಜಯ್ ಕುಮಾರ್ ಲಲ್ಲು ತಳಮಟ್ಟದ ನಾಯಕನಾಗಿದ್ದು ,ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಲಲ್ಲು ಮೂಲತಃ ಕುಶಿನಗರ ಜಿಲ್ಲೆಯವರು.ಭಾರತದ ರಾಜಕೀಯ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿರುವ ಹಂತದಲ್ಲಿ ಈಗ ಅವರು ಉತ್ತರಪ್ರದೇಶ ಕಾಂಗ್ರೆಸ್ ಅನ್ನು ಮುನ್ನಡೆಸಲಿದ್ದಾರೆ. ಎರಡು ಬಾರಿ ಶಾಸಕರಾಗಿರುವ ಅಜಯ್ ಕುಮಾರ್ ಲಲ್ಲು ಅವರು ರಾಜ್ ಬಬ್ಬರ್ ಅವರಿಂದ ತೆರವಾದ ಸ್ಥಾನವನ್ನು ಅಲಂಕರಿಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಉತ್ತರಪ್ರದೇಶದಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ  ಉದ್ದೇಶದಿಂದ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಲಲ್ಲು ಅವರನ್ನ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಮಾಡಿ, ರಾಜ್ಯಕ್ಕೆ ಹೊಸ ತಂಡವನ್ನು ಘೋಷಿಸಿದೆ.

ಅಜಯ್ ಕುಮಾರ್ ಲಲ್ಲು ಅವರೊಂದಿಗೆ ಸುಮಾರು 40 ಯುವ ಕ್ರಿಯಾಶೀಲ,ಯುವ ಉತ್ಸಾಹಿ ನಾಯಕರ ತಂಡವನ್ನು ಸಹ  ಘೋಷಿಸಲಾಗಿದೆ.

ಪಕ್ಷ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ,ಜನಸಂಖ್ಯೆಯಲ್ಲಿ ಅವರ ಅನುಪಾತಕ್ಕೆ ಅನುಗುಣವಾಗಿ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು ಶೇ.50 ರಷ್ಟನ್ನು ಹೊಂದಿರುವ ಹಿಂದುಳಿದ ವರ್ಗಕ್ಕೆ ಪ್ರೋತ್ಸಾಹ ನೀಡಲು ಗರಿಷ್ಠ ಪ್ರಾತಿನಿಧ್ಯ ನೀಡಲಾಗಿದೆ. ಅಂತೆಯೇ, ದಲಿತರು ,ಮೇಲ್ಜಾತಿಗಳು ಮತ್ತು ಮುಸ್ಲಿಮರಿಗೆ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಹೊಸ ತಂಡದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.

ಉತ್ತರಪ್ರದೇಶದಲ್ಲಿ ಪಕ್ಷದ ಉಸ್ತುವಾಗಿ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಎಂಟು ನಾಯಕರ ಕಾರ್ಯತಂತ್ರ ಗುಂಪುನ್ನ ರೂಪಿಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಸಲಹಾ ಮಂಡಳಿಯ ಸದಸ್ಯರನ್ನು ನೇಮಿಸಲಾಗಿದೆ. ಆರಾಧನಾ ಮಿಶ್ರಾ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಿಸಲಾಗಿದೆ.