ವಿಶ್ವಕಪ್-2019 : ಸರಣಿಯಲ್ಲಿ ಭಾರತದ ಮೊದಲ ಪಂದ್ಯ-ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

ವಿಶ್ವಕಪ್-2019 :  ಸರಣಿಯಲ್ಲಿ ಭಾರತದ ಮೊದಲ ಪಂದ್ಯ-ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

ಸೌಥಂಪ್ಟನ್‍: ವಿಶ್ವಕಪ್‍ ಏಕದಿನ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ.

 

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಈ ಸರಣಿಯಲ್ಲಿ ಇದು ಮೊದಲ ಪಂದ್ಯವಾಗಿದೆ. ಡು ಪ್ಲೆಸಿಸ್ ನಾಯಕತ್ವದ ಆಫ್ರೀಕಾ ತಂಡವು ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ಆಡಿರುವ ತಲಾ ಒಂದೊಂದು ಪಂದ್ಯಗಳನ್ನು ಸೋತಿದೆ.

ಭಾರತವು ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿತ್ತು.

ಪಂದ್ಯ ನಡೆಯವ ಸ್ಥಳ: ರೋಸ್ ಬೌಲ್ ಮೈದಾನ, ಸೌತಾಂಪ್ಟನ್.

ಸಮಯ: ಮಧ್ಯಾಹ್ನ 3 ಗಂಟೆ

ಅಂಪೈರ್: ರಿಚರ್ಡ್ ಕೆಟಲ್ಬರೋ, ಮೈಕೆಲ್ ಗಫ್

ಮೂರನೇ ಅಂಪೈರ್: ರಂಜನ್ ಮದುಗಲ್ಲೆ

 ವಿರಾಟ್‌ ಕೋಹ್ಲಿ ನಾಯಕತ್ವದ ಭಾರತ ತಂಡದಲ್ಲಿ ಶಿಖರ್‍ ಧವನ್‍, ರೋಹಿತ್‍ ಶರ್ಮಾ, ಕೆಎಲ್‍ ರಾಹುಲ್‍,  ಎಂಎಸ್‍ ಧೋನಿ(ವಿಕೇಟ್‍ ಕೀಪರ್‍) , ರವೀಂದ್ರ ಜಡೇಜಾ, ಹಾರ್ದಿಕ್‍ ಪಾಂಡ್ಯ, ವಿಜಯ್‍ ಶಂಕರ್‍, ಜಸ್ಪ್ರೀತ್‍ ಬುಮ್ರ, ಕೇದಾರ್‍ ಜಾಧವ್‍, ಯಜುವೇಂದ್ರ ಚಹಲ್‍ ತಂಡದಲ್ಲಿ ಆಡಲಿದ್ದಾರೆ.