ನಟಿ ಶೃತಿ ಹರಿಹರನ್ ಮನೆ ಮಾರಾಟಕ್ಕಿದೆ:

ನಟಿ ಶೃತಿ ಹರಿಹರನ್ ಮನೆ ಮಾರಾಟಕ್ಕಿದೆ:

ಲೂಸಿಯಾ ಬೆಡಗಿ ಶೃತಿ ಹರಿಹರನ್ ಸದ್ಯ ವಿದೇಶದಲ್ಲಿ ವಾಸವಾಗಿದ್ದಾರೆ. ನಾತಿಚರಾಮಿ ಸಿನಿಮಾದ ಬಳಿಕ ಬೇರೆ ಯಾವುದೇ ಸಿನಿಮಾಗಳಲ್ಲಿ ಶೃತಿ ಹರಿಹರನ್ ಕಾಣಿಸಿಕೊಂಡಿಲ್ಲ.

ಸದ್ಯ ಮನೆ ಮಾರಾಟಕ್ಕಿದೆ ಅನ್ನೋ ವಿಚಾರದ ಮೂಲಕ ಶೃತಿ ಸದ್ದಾಗಿದ್ದಾರೆ. ಆದ್ರೆ ಅದು ಸಿನಿಮಾದ ಟೈಟಲ್ ಅನ್ನೋದೆ ವಿಶೇಷ ಸಂಗತಿ.

ಕಾಮಿಡಿ-ಹಾರರ್ ಜಾನರ್ ‘ಮನೆ ಮಾರಾಟಕ್ಕಿದೆ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಸಿನಿಮಾದಲ್ಲಿ ಶೃತಿ ಹರಿಹರನ್, ಸಾಧುಕೋಕಿಲ, ಚಿಕ್ಕಣ್ಣ, ಕುರಿಪ್ರತಾಪ್, ರವಿಶಂಕರ್ ಹಾಗೂ ಕಾರುಣ್ಯ ರಾಮ್ ಅಭಿನಯಿಸಿದ್ದಾರೆ.

ಈ ಹಿಂದೆ ಪಟಾಕಿ, ಶ್ರಾವಣಿ ಸುಬ್ರಮಣ್ಯ,  ಶ್ರೀಕಂಠ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಂಜು ಸ್ವರಾಜ್ 'ಮನೆ ಮಾರಾಟಕ್ಕಿದೆ' ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಕಾಮಿಡಿ ದಿಗ್ಗಜರೇ ತುಂಬಿಕೊಂಡಿರೋ ಈ ಚಿತ್ರ ಸಾಕಷ್ಟು ಮನರಂಜನೆಯನ್ನು ಹೊತ್ತು ತರಲಿದೆಯಂತೆ. ಆದ್ರೆ ಶೃತಿ ಹರಿಹರನ್ ಎಂಥ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸೀಕ್ರೆಟ್  ನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.