ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ, ನಿಯಮ ಬಿಟ್ಟು ಕದಲುವುದಿಲ್ಲ : ಸ್ಪೀಕರ್

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ, ನಿಯಮ ಬಿಟ್ಟು ಕದಲುವುದಿಲ್ಲ : ಸ್ಪೀಕರ್

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸಂವಿಧಾನಬದ್ದ ನಿಯಮಗಳನ್ನು ಮೀರುವುದಿಲ್ಲ ಎಂದು ಸ್ಪೀಕರ್ ರಮೇಶ್‍ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜೀನಾಮೆ ಸಲ್ಲಿಸಿ ಮುಂಬೈ ಹೊಟೇಲ್‍ನಲ್ಲಿ ವಾಸ್ತವ್ಯ  ಹೂಡಿದ್ದ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‍ ಆದೇಶದ ಅನ್ವಯ ಸ್ಪೀಕರ್‍ ಭೇಟಿಗೆ ಇಂದು ಆಗಮಿಸಿದ್ದರು. ಶಾಸಕರ ಭೇಟಿಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್ ‘ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ವಿಳಂಬವಾಗಿಲ್'ಲ ಎಂದು ಹೇಳಿದ್ದಾರೆ.

ಶಾಸಕರು 6 ನೇ ತಾರೀಕು ಶನಿವಾರದಂದ ನನ್ನ ಭೇಟಿಗೆ ಕಾಲಾವಕಾಶನ್ನೂ ಕೇಳದೆ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಮರುದಿನ ರಜೆ ಇತ್ತು ಹಾಗೂ ಸೋಮವಾರ ನನ್ನ ವೈಯಕ್ತಿಕ ಕೆಲಸ ಇದ್ದಿದ್ದರಿಂದ ಮಂಗಳವಾರ ರಾಜೀನಾಮೆ ಪರಿಶೀಲನೆ ಮಾಡಿದೆ. ಆ ಬಳಿಕ ರಾಜೀನಾಮೆ ಸಲ್ಲಿಸಿದ್ದ 13 ಶಾಸಕರ ಪೈಕಿ 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿರಲಿಲ್ಲ. ಜೊತೆಗೆ ಶಾಸಕರು ಸ್ವ ಇಚ್ಚೆಯಿಂದಲೇ ರಾಜೀನಾಮೆ ಸಲ್ಲಿಸಿದ್ದಾರೆಯೇ ಎಂದು ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಶಾಸಕರು ಸ್ಪೀಕರ್‌ ಅವರನ್ನು ಭೇಟಿಯಾಗಲು ಬಂದಾಗ ಮುಂಬೈಗೆ ಹೋದ ಕಾರಣವನ್ನು ಸ್ಪೀಕರ್‌ ಕೇಳಿದ್ದಾರೆ. ಸ್ಪೀಕರ್‌ ಪ್ರಶ್ನೆಗೆ ಉತ್ತರಿಸಿದ ಶಾಸಕರು 'ರಾಜ್ಯದಲ್ಲಿ ಭದ್ರತೆಯ ಭಯ ಕಾಡಿದ್ದರಿಂದ ಮುಂಬೈಗೆ ತೆರಳಬೇಕಾಯಿತು ಎಂದು ಉತ್ತರಿಸಿದ್ದರು ಎಂದು ರಮೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.