ಸ್ಪೇನ್‌ ನಲ್ಲಿ ಕೊರೋನಾಗೆ ಒಂದೇ ದಿನ 655 ಮಂದಿ ಬಲಿ : ಸಾವಿನ ಸಂಖ್ಯೆ 4,089 ಕ್ಕೇ ಏರಿಕೆ

ಸ್ಪೇನ್‌ ನಲ್ಲಿ ಕೊರೋನಾಗೆ ಒಂದೇ ದಿನ 655 ಮಂದಿ ಬಲಿ : ಸಾವಿನ ಸಂಖ್ಯೆ 4,089 ಕ್ಕೇ ಏರಿಕೆ

ಸ್ಪೇನ್‌ : ಮಾರಣಾಂತಿಕ ಕೊರೋನಾ ವೈರಸ್‌ ಇಟಲಿ ನಂತರ ಈಗ ಸ್ಪೇನ್‌ ನಲ್ಲಿ ತನ್ನ ಮರಣ ಮೃದಂಗ ತೋರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 655 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 4,089 ಕ್ಕೇ ಏರಿಕೆ ಕಂಡಿದೆ ಎಂದು ಸ್ಪೇನ್‌ ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗೂ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳಿಗಿಂತ ಇಂದು ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದೆ.

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಸ್ಪೇನ್‌ ನಲ್ಲಿ ಏರಿಕೆಯಾಗುತ್ತಿದ್ದು, ಸುಮಾರು 56,188 ಜನರಲ್ಲಿ ಈ ಮಹಾಮಾರಿ ಸೋಂಕು ಇದೆ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಕಳೆದ 2 ತಿಂಗಳಿನಿಂದ ಇಡೀ ವಿಶ್ವವನ್ನೇ ನಡುಗಿಸಿರುವ ಮಹಾಮಾರಿ ಸೋಂಕಿಗೆ ಮೊದಲು ಚೀನಾದಲ್ಲಿ 3,600 ಜನರು ಬಲಿಯಾದರು ಈಗ ಇಟಲಿ ಮತ್ತು ಸ್ಪೇನ್‌ ಚೀನಾವನ್ನೇ ಹಿಂದಿಕ್ಕ್ಕಿದೆ. ಇಟಲಿಯಲ್ಲಿ ಕೊರೋನಾ ನಿಯಂತ್ರಣದ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ವಿಶ್ವದಾದ್ಯಂತ ೨೧ ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನೂ ಸೋಂಕಿತರ ಸಂಖ್ಯೆ 4 ಲಕ್ಷಕ್ಕೂ ಅಧಿಕವಾಗಿದ್ದು, ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಭಾರತದಲ್ಲಿ 21 ದಿನಗಳ ಲಾಕ್‌ ಡೌನ್‌ ಮಾಡಲಾಗಿದ್ದು, ಇದರ ನಡುವೆಯೇ ಸೋಂಕಿತರ ಸಂಖ್ಯೆ 650ಕ್ಕೇ ಏರಿದ. ಈವರೆಗೆ 16 ಜನರು ಈ ಕೊರೋನಾ ಸೋಂಕಿಗೆ ಮೃತರಾಗಿದ್ದಾರೆ. ಭಾರತದಲ್ಲೂ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯಿಂದ ದೇಶದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗುತ್ತಿದೆ.