2 ದಿನಗಳ 20ನೇ ರಾಷ್ಟ್ರೀಯ ಕಂಪನಿ ಸೆಕ್ರೆಟರಿ ಸಮ್ಮೇಳನ  ಬೆಂಗಳೂರಿನಲ್ಲಿ ಆರಂಭ 

2 ದಿನಗಳ 20ನೇ ರಾಷ್ಟ್ರೀಯ ಕಂಪನಿ ಸೆಕ್ರೆಟರಿ ಸಮ್ಮೇಳನ  ಬೆಂಗಳೂರಿನಲ್ಲಿ ಆರಂಭ 

ಇಂದಿನ ದೈನಂದಿನ ಬದುಕಿನಲ್ಲಿ ಸಾಮಾಜಿಕ ಮೌಲ್ಯಗಳು ಸಮಾಜಕ್ಕೆ ಬಹಳ ಮುಖ್ಯ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.

 20ನೇ ರಾಷ್ಟ್ರೀಯ ಕಂಪನಿ ಸೆಕ್ರೆಟರಿ ಸಮ್ಮೇಳನ ಉದ್ಘಾಟಿಸಿದ ಅವರು, ಕಾರ್ಪೊರೇಟ್ ವಲಯ ಕೂಡ ಮೌಲ್ಯಗಳು ಮತ್ತು ನೈತಿಕತೆಯನ್ನು ತಮ್ಮ ವೃತ್ತಿಯ ಭಾಗವಾಗಿಸಿಕೊಂಡಾಗ ಸಂಸ್ಥೆಗಳಿಗಷ್ಟೇ ಅಲ್ಲದೇ ಇಡೀ ದೇಶಕ್ಕೆ ಬಹಳ ಪ್ರಯೋಜನವಾಗಲಿದೆ ಎಂದರು.

 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ರೆಡಿಟ್ ಅಕ್ಸೆಸ್ ಗ್ರಾಮೀಣ  ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಉದಯ್ ಕುಮಾರ್ ಮಾತನಾಡಿ ಭಾರತೀಯ ಕಾರ್ಪೋರೇಟ್ ವಲಯದಲ್ಲಿ ಕಂಪನಿ ಸೆಕ್ರೆಟರಿಗಳು ತಮ್ಮ ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕಾರ್ಪೋರೇಟ್ ಚಟುವಟಿಕೆಯ ಎಲ್ಲ ಆಗುಹೋಗುಗಳ ಪರಿಚಯವನ್ನೂ ಪಡೆದಿರುವ ಅವರು ಏಕ ಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸುವ ಕಾರ್ಯಕ್ಷಮತೆ ಹೊಂದಿದ್ದಾರೆ ಎಂದು ಹೇಳಿದರು. 

ಸಿ.ಎಸ್.ಐ ಅಧ್ಯಕ್ಷರಾದ ಸಿ.ಎಸ್.ರಂಜಿತ್ ಪಾಂಡೆ ಮಾತನಾಡಿ ಈ  ವಾರ್ಷಿಕ ಸಮ್ಮೇಳನವು ಕಂಪನಿ ವೃತ್ತಿಪರರ ಉತ್ತರದಾಯಿತ್ವವನ್ನು ವೃದ್ಧಿಸುವ, ಸ್ಟಾರ್ಟ್ ಅಪ್ ಕಂಪನಿಗಳಲ್ಲಿನ ವೃತ್ತಿಪರ ಅವಕಾಶಗಳನ್ನು ಹೆಚ್ಚಿಸುವ ಮತ್ತು ಕೃತಕ ಬುದ್ಧಿ ಮತ್ತೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಹಾಗೂ ಕಂಪನಿ ಮತ್ತು ಕಾರ್ಪೋರೇಟ್ ಕಾನೂನು ವಲಯದಲ್ಲಿ ಇನ್ನಷ್ಟು ಹೆಚ್ಚು ಪರಿಣಿತಿಯನ್ನು ಗಳಿಸಿಕೊಳ್ಳುವ ಕಡೆಗೆ ಹೆಚ್ಚು ಒತ್ತು ನೀಡಿದೆ.

ಈ ಸಂದರ್ಭದಲ್ಲಿ ಹೊರತರುತ್ತಿರುವ ಸ್ಮರಣಿಕೆ ಕೂಡಾ ಕಾರ್ಪೋರೇಟ್ ವಲಯದಲ್ಲಿ ಆಗಿರುವ ಹೊಸ ಕಾನೂನು ಮತ್ತು ಅದರ ತಿದ್ದುಪಡಿಗಳನ್ನು ಒಳಗೊಂಡು ಕಂಪನಿ ಸೆಕ್ರೆಟರಿಗಳಿಗೆ ಅತ್ಯಂತ ಉಪಯುಕ್ತ ಕೈಪಿಡಿಯಾಗಿ ಹೊರಬಂದಿದೆ . ಹೊಸ ಭಾರತದ 2022 ರ ಗುರಿ ಸಾಧನೆಗೆ ಎಲ್ಲ ರೀತಿಯಲ್ಲಿ ಸಹಕರಿಸುತ್ತೆನೆ ಎಂದರು  

ಈ  ಸಂದರ್ಭದಲ್ಲಿ ‘ಕಂಪನಿ ಸೆಕ್ರೆಟರಿ ಇನ್ ಪ್ರಾಕ್ಟೀಸ್ - ರೆಡಿ ರೆಕನರ್’ ಎಂಬ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಇದು ಕಾರ್ಪೊರೇಟ್ ವಲಯಕ್ಕೆ ಸಂಬಂಧಿಸಿದ ಕಾನೂನಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುತ್ತದೆ.

ಸಮ್ಮೆಳನದಲ್ಲಿ ಕಂಪನಿ ಕಾರ್ಯದರ್ಶಿಗಳು, ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು, ಕಂಪನಿ ನಿಯಂತ್ರಕರು ಬಾಗವಹಿಸಿದ್ದರು  “ವೃತ್ತಿಪರ ಶ್ರೇಷ್ಠತೆಯ ಚಾಲಕ ಶಕ್ತಿ ವಿಸ್ತರಣೆ” ಕುರಿತ ವಿಚಾರ ಸಂಕಿರಣ ನಡೆಯಿತು.